ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಕಾರ್ಪೋರೇಶನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯು ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ನಿರ್ದೇಶಕ, ಭಾರತೀಯ ಬ್ಯಾಂಕ್ಗಳ ಸಂಘದ (ಐಬಿಎ) ಅಧ್ಯಕ್ಷ ರಾಜ್ ಕಿರಣ್ ರೈ ಹೇಳಿದ್ದಾರೆ.
ಯೂನಿಯನ್ ಬ್ಯಾಂಕ್ನ ವಲಯ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ನವೀಕೃತ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಸಿಬ್ಬಂದಿ ತಮ್ಮ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಂಡು ನಮ್ಮ ಬ್ಯಾಂಕ್ ಉನ್ನತ ಪ್ರಗತಿಯೆಡೆಗೆ ತೆಗೆದುಕೊಂಡು ಹೋಗಬೇಕು.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೂಡ ಬ್ಯಾಂಕಿನ ಸಿಬ್ಬಂದಿಯ ಕಾರ್ಯ ನಿಷ್ಠೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಡಿಜಿಟಲೈಸೇಶನ್ ವಿಭಾಗದಿಂದ ಹೊರತಂದ ತ್ರೈಮಾಸಿಕ ಪತ್ರಿಕೆ ‘Digital trendz’ ಬಿಡುಗಡೆ ಮಾಡಿದರು.