ಬಂಟ್ವಾಳ (ದಕ್ಷಿಣ ಕನ್ನಡ): ತಾಲೂಕಿನ 38 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜ್ಯ ಸರ್ಕಾರ ಗ್ರಾಮೀಣ ಜನರಿಗೆ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಳ್ಳಿಗೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ವೃದ್ಧರು, ಅಶಕ್ತರು, ಮಹಿಳೆಯರು, ವಿಧವೆಯರಿಗೆ ದೊರಕುವ ಪಿಂಚಣಿಯನ್ನೂ ಸಕಾಲಕ್ಕೆ ಒದಗಿಸಲು ಸರ್ಕಾರ ವಿಫಲವಾಗಿದ್ದು, ಈ ಕುರಿತು ರಾಜ್ಯಾದ್ಯಂತ ಗಮನ ಸೆಳೆಯುವುದಾಗಿ ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಶಿವಪ್ರಸಾದ್ ಕನಪಾಡಿ, ದಿವಾಕರ ಪಂಬದಬೆಟ್ಟು, ಮದುಸೂಧನ್ ಶೆಣೈ, ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಕಾವಳಪಡೂರು ಗ್ರಾ.ಪಂ. ಮುಂಭಾಗ ಮಾತನಾಡಿದ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ರಾಜ್ಯ ಸರ್ಕಾರ ಎಲ್ಲ ಹಂತದಲ್ಲೂ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೋಹನ ಗೌಡ ಕಲ್ಮಂಜ, ಪ್ರಮುಖರಾದ ಚಂದ್ರಶೇಖರ್ ಕರ್ಣ, ಧನಲಕ್ಷ್ಮಿ ಬಂಗೇರ, ವೀರೇಂದ್ರ ಅಮೀನ್, ಶಾರದಾ ಶೆಟ್ಟಿ, ಅಬ್ದುಲ್ ಲತೀಫ್, ಮಾಣಿಕ್ಯರಾಜ್ ಜೈನ್, ಮೋನಕ್ಕ, ಕ್ಲಿಫರ್ಡ್ ಡಿಸೋಜಾ, ಜಸ್ಟಿನ್ ಮ್ಯಾಥ್ಯೂ ಮತ್ತಿತರರು ಉಪಸ್ಥಿತರಿದ್ದರು.