ETV Bharat / state

ಕೇಂದ್ರದಿಂದ ಫಸಲ್ ಭೀಮಾ ಯೋಜನೆಯ ₹950 ಕೋಟಿ ಹಗಲು ದರೋಡೆ.. ಪುತ್ತೂರಿನ ರೈತರ ಆರೋಪ - ನೂತನ ಕೃಷಿ ಕಾಯ್ದೆಗಳ ವಿರುದ್ಧ ಪುತ್ತೂರಿನಲ್ಲಿ ಪ್ರತಿಭಟನೆ

ದೇಶದ ರೈತರ ಹಣವನ್ನು ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ. ಅದಾನಿ-ಅಂಬಾನಿಗಳ ಸಂಪತ್ತು ಕಳೆದ 6 ವರ್ಷಗಳಲ್ಲಿ 5 ಪಟ್ಟು ಹೆಚ್ಚಾಗಿದೆ. ಸರ್ಕಾರ ನಡೆಸಲಾಗದ ಅವರು ರಾಜೀನಾಮೆ ನೀಡಿ ಅಂಬಾನಿ-ಅದಾನಿಗಳಿಗೆ ಅವಕಾಶ ನೀಡಲಿ..

protest in putur against new agriculture laws
ಪುತ್ತೂರುಪುತ್ತೂರಿನಲ್ಲಿ ಪ್ರತಿಭಟನೆ
author img

By

Published : Jan 18, 2021, 6:45 PM IST

Updated : Jan 18, 2021, 7:56 PM IST

ಪುತ್ತೂರು : ರೈತರ ವಿರುದ್ಧ ದೌರ್ಜನ್ಯ, ರೈತ ವಿರೋಧಿ ಕಾನೂನು ಹಾಗೂ ಫಸಲ್ ಭೀಮಾ ಯೋಜನೆಯಲ್ಲಿ ರೈತರಿಗೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಪುತ್ತೂರು ಗಾಂಧಿಕಟ್ಟೆ ಬಳಿ ಪ್ರತಿಭಟನೆ ನಡೆಸಲಾಯ್ತು.

ಪುತ್ತೂರಿನಲ್ಲಿ ಪ್ರತಿಭಟನೆ

ರೈತರ ಮಾರಣ ಹೋಮಕ್ಕೆ ಸಿದ್ಧತೆ ನಡೆಸುತ್ತಿರುವ ಕೇಂದ್ರ ಸರ್ಕಾರ, ಫಸಲ್ ಭಿಮಾ ಯೋಜನೆಯಲ್ಲಿ ರೈತರಿಗೆ ಮೋಸದಾಟ ನಡೆಸುವ ಮೂಲಕ ವಂಚನೆ ನಡೆಸುತ್ತಿದೆ. ಕೊರೊನಾ ನೆಪದಲ್ಲಿ ನಡೆದ ಲಾಕ್‌ಡೌನ್, ರೈತ ವಿರೋಧಿಯಾಗಿರುವ ಮೂರು ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಪಾಸು ಮಾಡಲು ನಡೆಸಿದ ಹುನ್ನಾರವೇ ಹೊರತು ಜನರ ರಕ್ಷಣೆಗಾಗಿ ಮಾಡಿದ್ದಲ್ಲ ಎಂದು ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಆರೋಪಿಸಿದರು.

ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‌ಗಳ ಮೂಲಕ ರೈತರಿಂದ ಒಟ್ಟು ₹1050 ಕೋಟಿ ಫಸಲ್​ ಭೀಮಾ ಯೋಜನೆಯಲ್ಲಿ ಪಾವತಿ ಮಾಡಲಾಗಿದೆ. ಸರ್ಕಾರ ರೈತರ ಖಾತೆಗೆ ನೇರವಾಗಿ ₹25 ಸಾವಿರ ಪರಿಹಾರಧನ ನೀಡುತ್ತಿದ್ರೆ, ಕೇವಲ ₹250 ಕೋಟಿ ಮಾತ್ರ ಬಳಕೆಯಾಗುತ್ತಿತ್ತು. ಆದರೆ, ಇದೀಗ 950 ಕೋಟಿಗಿಂತಲೂ ಅಧಿಕ ಹಣವನ್ನು ಕೇಂದ್ರ ಸರ್ಕಾರ ಹಗಲು ದರೋಡೆ ಮಾಡಿದೆ.

ದೇಶದ ರೈತರ ಹಣವನ್ನು ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ. ಅದಾನಿ-ಅಂಬಾನಿಗಳ ಸಂಪತ್ತು ಕಳೆದ 6 ವರ್ಷಗಳಲ್ಲಿ 5 ಪಟ್ಟು ಹೆಚ್ಚಾಗಿದೆ. ಸರ್ಕಾರ ನಡೆಸಲಾಗದ ಅವರು ರಾಜೀನಾಮೆ ನೀಡಿ ಅಂಬಾನಿ-ಅದಾನಿಗಳಿಗೆ ಅವಕಾಶ ನೀಡಲಿ ಎಂದು ಆಕ್ರೋಶ ಹೊರ ಹಾಕಿದ್ರು.

ರೈತ ಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಮಾತನಾಡಿ, ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಯನ್ನು ವಿರೋಧಿಸಿ ಕಳೆದ 54 ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ 100ಕ್ಕೂ ಅಧಿಕ ಅನ್ನದಾತರು ಪ್ರಾಣ ಕಳೆದುಕೊಂಡಿದ್ದಾರೆ.

ರೈತ ವಿರೋಧಿ ಬಿಜೆಪಿ ಸರ್ಕಾರವನ್ನು ಕ್ವಿಟ್ ಇಂಡಿಯಾ ಚಳವಳಿಯಂತೆ ಈ ದೇಶದಿಂದ ತೊಲಗಿಸುವುದು ರೈತರಿಗೆ ಅನಿವಾರ್ಯವಾಗಿದೆ ಎಂದರು. ಪ್ರತಿಭಟನೆಯಲ್ಲಿ ಮುಖಂಡರಾದ ರಾಮಣ್ಣ ವಿಟ್ಲ, ಪ್ರೇಮನಾಥ್ ಶೆಟ್ಟಿ, ರೂಪೇಶ್ ರೈ ಅಲಿಮಾರ್, ಶೇಖರ್ ರೈ ಕುಂಬ್ರ, ಇಸುಬು ಪುಣಚ, ಸಂಜೀವ ಕುಲಾಲ್, ವಿಕ್ಟರ್ ಕಡಬ ಮತ್ತಿತರರು ಉಪಸ್ಥಿತರಿದ್ದರು.

Last Updated : Jan 18, 2021, 7:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.