ಮಂಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣ ಖಂಡಿಸಿ ಸುನ್ನಿ ಕೋ ಆರ್ಡಿನೇಷನ್ ಕರ್ನಾಟಕ ರಾಜ್ಯ ಘಟಕ ನೀಡಿದ ಕರೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಮೂಡಬಿದ್ರೆ ತಾಲೂಕಿನ ವಿವಿಧ ಮಸೀದಿಯ ಮುಂದೆ ರಾಷ್ಟ್ರಧ್ವಜ ಎತ್ತಿಹಿಡಿದು ಸಿಎಎ ಕಾಯ್ದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯ್ತು. ಈ ವೇಳೆ ಮಂಗಳೂರು ಪೊಲೀಸರ ಕ್ರಮವನ್ನು ಖಂಡಿಸಿ ಭಿತ್ತಿಪತ್ರವನ್ನು ಪ್ರದರ್ಶಿಸಿದರು.
ಪಂಜರಕೋಡಿ, ಬನ್ನೂರು ಮುಕ್ಕ, ಈಶ್ವರಮಂಗಲ, ನೆಚ್ಚಬೆಟ್ಟು, ಉಜಿರೆ, ಬಾಳೆಪುಣಿ, ಕಾಟಿಪಳ್ಳ, ಕೃಷ್ಣಾಪುರ, ಸರಳಿಕಟ್ಟೆ, ಹಿದಾಯತ್‌ನಗರ, ದೇರಳಕಟ್ಟೆ, ಕುತ್ತಾರ್ ಸುಭಾಷ್‌ನಗರ, ಕಲ್ಮಿಂಜ, ತೌಡುಗೋಳಿ, ಕೊಳಕೆ, ಆಲಡ್ಕ, ಕೆಸಿ ರೋಡ್, ನೆಕ್ಕಿಲ ಪಂಜ, ಮುಡಿಪು, ಅಳೇಕಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಸೀದಿಗಳ ಮುಂದೆ ಭಿತ್ತಿಪತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.