ETV Bharat / state

ಉಳ್ಳಾಲ: ಎಪಿಎಂಸಿ,ಭೂ ಸುಧಾರಣೆಯ ತಿದ್ದುಪಡಿ ಕಾಯ್ದೆ ಖಂಡಿಸಿ ಪ್ರತಿಭಟನೆ... - protest by Social Democratic Party of India in ullala

ದೇಶದ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ಉಚಿತವಾಗಿ ನೀಡುತಿರುವ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ಸರ್ಕಾರ ಶೀಘ್ರವಾಗಿ ಹಿಂಪಡೆಯಬೇಕು ಎಂದು ಎಸ್ ಡಿಪಿಐ ಮುಖಂಡ ಝಾಕೀರ್ ಉಳ್ಳಾಲ್ ಒತ್ತಾಯಿಸಿದ್ದಾರೆ.

protest by Social Democratic Party of India in ullala
ಎಪಿಎಂಸಿ,ಭೂ ಸುಧಾರಣೆಯ ತಿದ್ದುಪಡಿ ಕಾಯ್ದೆ ಖಂಡಿಸಿ ಪ್ರತಿಭಟನೆ.
author img

By

Published : Sep 27, 2020, 7:58 PM IST

ಉಳ್ಳಾಲ: ಎಪಿಎಂಸಿ, ಭೂ ಸುಧಾರಣಾ ಕಾಯ್ದೆ,ಕಾರ್ಮಿಕ ವಿರೋಧಿ ಕಾಯ್ದೆಯ ತಿದ್ದುಪಡಿಗಳನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ನಗರ ಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಎಸ್.ಡಿ.ಪಿ.ಐ. ರಾಜ್ಯ ಸಮಿತಿ ಸದಸ್ಯರಾದ ಅಕ್ರಮ್​​ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ರೈತವಿರೋಧಿ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಯ ತಿದ್ದುಪಡಿಗಳನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ ಪ್ರತಿಭಟನೆಗಳು ನಡೆಸುತ್ತಿದೆ. ಆದರೆ, ಬೇರೆ ವಿರೋಧ ಪಕ್ಷಗಳು ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು.

ಎಸ್ ಡಿಪಿಐ ಮುಖಂಡ ಝಾಕೀರ್ ಉಳ್ಳಾಲ್ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ಉಚಿತವಾಗಿ ನೀಡುತಿರುವ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ಸರ್ಕಾರ ಶೀಘ್ರವಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಎಸ್.ಡಿ.ಪಿ.ಐ. ಉಳ್ಳಾಲ ನಗರ ಸಮಿತಿಯ ಅಧ್ಯಕ್ಷ ಅಬ್ಬಾಸ್ ಎ.ಆರ್, ಉಪಾಧ್ಯಕ್ಷ‌ ನಿಝಾಮ್ ಉಳ್ಳಾಲ್, ಕಾರ್ಯದರ್ಶಿ ಶಮೀರ್ ಝಬೈರ್ , ಎಸ್.ಡಿ.ಟಿ.ಯು ಕೋಶಾಧಿಕಾರಿ ಅಬುಬಕ್ಕರ್ ಮೇಲಂಗಡಿ,ಎಸ್.ಡಿ.ಎ.ಸಿ.ಯು.ಕೋಶಾಧಿಕಾರಿ ಕಲೀಲ್ ಉಳ್ಳಾಲ್ , ಎಸ್.ಡಿ.ಪಿ.ಐ. ಮುಖಂಡರಾದ ನವಾಝ್ ಉಳ್ಳಾಲ್ ,ಮುಸ್ಲಿಂ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ್, ಎಸ್.ಡಿ.ಪಿ.ಐ. ಮುಖಂಡ ಇಕ್ಬಾಲ್ ಕೋಟೇಪುರ , ಅಳೇಕಲ ವಾರ್ಡ್ ಕೌನ್ಸಿಲರ್ ಅಝ್ಗರ್ ಆಲಿ , ಅಳೇಕಲ ಬ್ರಾಂಚ್ ಅಧ್ಯಕ್ಷ ಸಾಧಿಕ್ ಯು.ಬಿ ರವೂಫ್ ಹಳೆಕೋಟೆ. ಅಲ್ತಾಫ್ ಉಳ್ಳಾಲ್, ಹನೀಫ್ ಮಾರ್ಗತಲೆ, ಮುಂತಾದವರು ಉಪಸ್ಥಿತರಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.