ಬಂಟ್ವಾಳ : ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಡಿವೈಎಫ್ಐ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ?. ದಲಿತ ಸಮುದಾಯಕ್ಕೆ ನೋವುಂಟಾದಾಗ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಾಗ ಬೇಟಿ ಬಚಾವೋ ಎನ್ನುತ್ತಿದ್ದ ಬಿಜೆಪಿ ನಾಯಕರು ಈಗ ಮೌನವಾಗಿರುವುದೇಕೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಈ ವೇಳೆ ಡಿವೈಎಫ್ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸಿದಾಸ್ ವಿಟ್ಲ, ಜನಾರ್ಧನ ಕೆಸರಗದ್ದೆ, ಡಿವೈಎಫ್ಐ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಮುಖಂಡರಾದ ಸಯ್ಯದ್ ರಿಯಾಜ್ ಬಂಟ್ವಾಳ, ನ್ಯಾಯವಾದಿ ಮಹ್ಮದ್ ಗಝಾಲಿ, ರಾಜಾ ಚೆಂಡ್ತಿಮಾರ್, ಕೃಷ್ಣಪ್ಪ ಪುದ್ದೊಟ್ಟು, ಮಹ್ಮದಾಲಿ ಮದಕ, ಅಲ್ತಾಪ್ ತುಂಬೆ, ಖಲೀಲ್ ಬಾಪು, ಬೂಡಾ ಮಾಜಿ ಸದಸ್ಯರಾದ ವೆಲೇರಿಯಾ, ಪುರಸಭಾ ಆಶ್ರಯ ಯೋಜನೆ ಸಮಿತಿಯ ಮಾಜಿ ಸದಸ್ಯರಾದ ತ್ರಿಶೀಲಾ, ಉಮೇಶ್ ವಾಮದಪದವು, ಪುನೀತ್ ರಾಜ್, ಪ್ರೀತಂ ಮುಂತಾದವರು ಭಾಗವಹಿಸಿದ್ದರು.