ಮಂಗಳೂರು: ನಗರದ ಹೊಯಿಗೆ ಬಜಾರ್ನಲ್ಲಿ ಮೀನು ಸಂಸ್ಕರಣಾ ಘಟಕದಲ್ಲಿ ಕೆಲಸಕ್ಕಿದ್ದ ಬಿಹಾರ ಮೂಲದ ಮೂವರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಮೀನು ಸಂಸ್ಕರಣಾ ಘಟಕದ ಮೇಲೆ ದಿಢೀರ್ ದಾಳಿ ನಡೆಸಿದ ಕಾರ್ಮಿಕ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ, ಮೀನು ಕಟ್ಟಿಂಗ್ ಕೆಲಸ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಮೂವರು ಬಾಲ ಕಾರ್ಮಿಕರನ್ನು ಕೆಲಸದಿಂದ ಬಿಡಿಸಿ, ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆಗೊಳಿಸಿತು. ಅಲ್ಲದೆ ಮೀನು ಸಂಸ್ಕರಣಾ ಘಟಕದ ಮಾಲೀಕನ ವಿರುದ್ಧ ದೂರು ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ.
ಅಧಿಕಾರಿಗಳಾದ ವಿಲ್ಮಾ ತಾವ್ರೊ, ಹಿರಿಯ ಕಾರ್ಮಿಕ ನಿರೀಕ್ಷಕ ರಾಜಶೇಖರ ರೆಡ್ಡಿ, ವೀರೇಂದ್ರ ಕುಂಬಾರ, ಮಂಗಳೂರು ದಕ್ಷಿಣ ಬಿ.ಆರ್.ಪಿ, ಗೀತಾ ಶಾನ್‍ಭಾಗ್, ಯೋಜನಾ ನಿರ್ದೇಶಕ ಶ್ರೀನಿವಾಸ ಇದ್ದರು.