ಮಂಗಳೂರು: ಪೊಲೀಸ್ ವೃತ್ತಿ ಜೀವನದಲ್ಲಿ ಪದೋನ್ನತಿ ಮಹತ್ತರವಾದ ಘಟ್ಟ. ಜವಾಬ್ದಾರಿ, ಕರ್ತವ್ಯಗಳು ಹೆಚ್ಚಾಗುತ್ತವೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.
ನಗರದ ಪೊಲೀಸ್ ಸಮುದಾಯ ಭವನದಲ್ಲಿ ಗುರುವಾರ ನಡೆದ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಪದೋನ್ನತಿ ನೀಡಿ ಅವರು ಮಾತನಾಡಿದರು.
ಪದೋನ್ನತಿ ಬಳಿಕ ಕಾನೂನು, ನಿಯಮಗಳ ಅರಿವೂ ವಿಸ್ತರಿಸಬೇಕು. ಠಾಣೆಗೆ ಬಂದವರೊಡನೆ ನಾವು ವರ್ತಿಸುವುದರಿಂದ ಹಿಡಿದು ಎಲ್ಲ ಹಂತದ ಅರಿವು, ಕಾರ್ಯ ದಕ್ಷತೆಯನ್ನು ಹೊಂದಿರಬೇಕು ಎಂದು ಹೇಳಿದರು.
143 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪದೋನ್ನತಿ ಪದವಿ ನೀಡಲಾಯಿತು. ಎಆರ್ಎಸ್ಐನಿಂದ ಆರ್ಎಸ್ಐ ಹುದ್ದೆಗೆ 7 ಮುಂಬಡ್ತಿ, ಸಿಎಚ್ಸಿನಿಂದ ಎಎಸ್ಐ ಹುದ್ದೆಗೆ 29 ಅಧಿಕಾರಿಗಳಿಗೆ ಮುಂಬಡ್ತಿ, ಎಎಚ್ಸಿನಿಂದ ಎಆರ್ಎಸ್ಐ ಹುದ್ದೆಗೆ 40 ಅಧಿಕಾರಿಗಳಿಗೆ ಮುಂಬಡ್ತಿ, ಸಿಪಿಸಿನಿಂದ ಸಿಎಚ್ಸಿ ಹುದ್ದೆಗೆ 66 ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಯಿತು.
ಸಿಪಿಸಿಯಿಂದ ಎಎಚ್ಸಿ ಹುದ್ದೆಗೆ 3 ಮಂದಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ. ಡಿಸಿಪಿ ಹನುಮಂತ ರಾಯ, ಲಕ್ಷ್ಮೀ ಗಣೇಶ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಇದ್ದರು.