ಮಂಗಳೂರು: ಕಡಲತೀರದಲ್ಲಿ ಸಿರಿಯಾ ದೇಶದ ಹಡಗಿನಲ್ಲಿ ದೋಷ ಕಂಡು ಬಂದಿದ್ದು ಅಪಾಯದಲ್ಲಿದ್ದ 15 ಮಂದಿಯನ್ನು ರಕ್ಷಿಸಲಾಗಿದೆ. ಉಳ್ಳಾಲದ 5 ರಿಂದ 6 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ಸಂಭವಿಸಿದೆ. MV PRINCESS MIRAL ಎಂಬ ಹಡಗು ಮಂಗಳೂರು ತೀರದಲ್ಲಿ ಸಾಗುವ ವೇಳೆ ದೋಷ ಕಾಣಿಸಿಕೊಂಡಿದೆ. ಈ ಹಡಗಿನಲ್ಲಿ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸಲಾಗುತ್ತಿತ್ತು.
ಒಮನ್ನಿಂದ ಈಜಿಪ್ಟ್ಗೆ ಪ್ರಯಾಣ ಬೆಳೆಸಿದ್ದ ಹಡಗು ಮಂಗಳೂರು ಕಡಲತೀರದಲ್ಲಿ ಪ್ರಯಾಣಿಸುವಾಗ ಒಳಭಾಗದ ಸಣ್ಣ ರಂಧ್ರದ ಮೂಲಕ ನೀರು ಬರಲಾರಂಭಿಸಿದೆ. ಇದರಿಂದ ಹಡಗಿನಲ್ಲಿದ್ದ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿದ್ದ 15 ಮಂದಿಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ರಾ.. ರಾ.. ರಕ್ಕಮ್ಮ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಶಾಸಕ ರೇಣುಕಾಚಾರ್ಯ
ಹಡಗಿನಲ್ಲಿ ಸಣ್ಣ ರಂಧ್ರದ ಮೂಲಕ ನೀರು ಬರಲು ಪ್ರಾರಂಭಿಸಿರುವುದರಿಂದ ಅದನ್ನು ಅಂಡರ್ ವಾಟರ್ ನಲ್ಲಿ ದುರಸ್ಥಿ ಪಡಿಸಲು, ಮಂಗಳೂರು ಹಳೆ ಬಂದರು ವ್ಯಾಪ್ತಿಯ ದಕ್ಷಿಣದ ಬದಿಯಿಂದ ಸುಮಾರು 5.2 ಮೈಲಿ ದೂರದಲ್ಲಿ ಲಂಗರು ಹಾಕಲಾಗಿದೆ.