ETV Bharat / state

ಮಂಗಳೂರಿನಲ್ಲಿ ಖಾಸಗಿ ವಾಹನ ಓಡಾಟ ನಿಷೇಧ, ಗ್ರಾಮೀಣ ಭಾಗದಲ್ಲಿ ಕೊಂಚ ರಿಲ್ಯಾಕ್ಸ್.. - ಮಂಗಳೂರಿನಲ್ಲಿ ಖಾಸಗಿ ವಾಹನ ಓಡಾಟ ನಿಷೇಧ

ಈ ಬಗ್ಗೆ ಮಾಹಿತಿ ನೀಡಿರುವ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಅವರು, ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಹಳ್ಳಿಗಳಿಂದ ನಗರಕ್ಕೆ ದಿನಸಿ ಖರೀದಿಸಲು ಬರುವವರಿಗೆ ದ್ವಿಚಕ್ರ, ಅಟೋರಿಕ್ಷಾ, ಜೀಪ್, ಬೇರೆ ಬಾಡಿಗೆ ವಾಹನಗಳಿಗೆ ಅವಕಾಶ ಇದೆ. ಬೇರೆ ಖಾಸಗಿ ವಾಹನದಲ್ಲಿ ಓಡಾಟ ನಿಷೇಧಿಸಲಾಗಿದೆ. ಬಾಡಿಗೆ ವಾಹನದಲ್ಲಿ ದಿನಸಿ ಖರೀದಿಸಲು ಬರುವ ಒಬ್ಬರಿಗೆ ಮತ್ತು ಡ್ರೈವರ್‌ಗೆ ಮಾತ್ರ ಅವಕಾಶ ನೀಡಲಾಗಿದೆ.

Sindhu rupesh
ಸಿಂಧೂ ರೂಪೇಶ್
author img

By

Published : Apr 2, 2020, 7:29 PM IST

ಮಂಗಳೂರು: ಕೊರೊನಾ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್ ಘೋಷಿಸಲಾಗಿದ್ದರೂ ಖಾಸಗಿ ವಾಹನಗಳ ಓಡಾಟ ಜಾಸ್ತಿಯಾಗಿವೆ. ಈಗ ಎಲ್ಲಾ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶಿಸಿದ್ದಾರೆ.‌

ಮಂಗಳೂರಿನಲ್ಲಿ ಖಾಸಗಿ ವಾಹನಗಳ ಓಡಾಟ ನಿಷೇಧ..

ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ. ಪಿ ಎಸ್ ಹರ್ಷ ಅವರು, ಮಂಗಳೂರು ನಗರದಲ್ಲಿ ಖಾಸಗಿ ವಾಹನ ಓಡಾಟ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳನ್ನು ಮನೆಯ ಸಮೀಪದ ಅಂಗಡಿಯಲ್ಲಿ ಖರೀದಿಸಬೇಕು. ವೈದ್ಯಕೀಯ ನೆರವಿಗೆ 108, ಬೇರೆ ವಿಚಾರಕ್ಕೆ 1077ಗೆ ಕರೆ ಮಾಡಿದರೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಡಾಕ್ಟರ್, ನರ್ಸ್, ಪ್ಯಾರಾ ಮೆಡಿಕಲ್ ಅವರು ವೈದ್ಯಕೀಯ ವೃತ್ತಿಯಲ್ಲಿ ಕಚೇರಿ ಮತ್ತು ಮನೆಗೆ ತೆರಳುತ್ತಿದ್ದರೆ, ಮಾಧ್ಯಮದವರಿಗೆ ಗುರುತಿನ ಚೀಟಿ ತೋರಿಸಿ ವಾಹನದಲ್ಲಿ ಹೋಗಬಹುದು. ಉಪವಿಭಾಗಧಿಕಾರಿಯಿಂದ ನಿರ್ದಿಷ್ಟ ಪಾಸ್ ಪಡೆದವರು ಓಡಾಡಬಹುದು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಅವರು, ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಹಳ್ಳಿಗಳಿಂದ ನಗರಕ್ಕೆ ದಿನಸಿ ಖರೀದಿಸಲು ಬರುವವರಿಗೆ ದ್ವಿಚಕ್ರ, ಅಟೋರಿಕ್ಷಾ, ಜೀಪ್, ಬೇರೆ ಬಾಡಿಗೆ ವಾಹನಗಳಿಗೆ ಅವಕಾಶ ಇದೆ. ಬೇರೆ ಖಾಸಗಿ ವಾಹನದಲ್ಲಿ ಓಡಾಟ ನಿಷೇಧಿಸಲಾಗಿದೆ. ಬಾಡಿಗೆ ವಾಹನದಲ್ಲಿ ದಿನಸಿ ಖರೀದಿಸಲು ಬರುವ ಒಬ್ಬರಿಗೆ ಮತ್ತು ಡ್ರೈವರ್‌ಗೆ ಮಾತ್ರ ಅವಕಾಶ ನೀಡಲಾಗಿದೆ.

ಅಲ್ಲದೇ ವೈದ್ಯಕೀಯ ನೆರವಿಗೆ‌ 108 ಮತ್ತು 1077ಗೆ ಕರೆ ಮಾಡಿದರೆ ವ್ಯವಸ್ಥೆ ಮಾಡಲಾಗುವುದು. ಕ್ಯಾನ್ಸರ್, ಡಯಾಲಿಸಿಸ್ ಚಿಕಿತ್ಸೆಗೆ ಬರುವವರು 1077ಗೆ ಕರೆ ಮಾಡಿ ಪಾಸ್ ಪಡೆದು ಹೋಗಲು ಅವಕಾಶ ನೀಡಲಾಗಿದೆ. ಅಲ್ಲದೇ ವೈದ್ಯಕೀಯ ವೃತ್ತಿಯಲ್ಲಿ ಇರುವವರು ತಮ್ಮ ಗುರುತಿನ ಚೀಟಿ ತೋರಿಸಿ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.