ಬಂಟ್ವಾಳ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ನಿರ್ಮಾಣದ ಅಡಿಗಲ್ಲು ಹಾಕುವ ದಿನದಂದೇ ತನ್ನ ಗಡ್ಡ, ಕೂದಲಿಗೆ ಮುಕ್ತಿ ನೀಡಲು ತೊಟ್ಟ ಪಣದಂತೆ ಬಂಟ್ವಾಳದ ಪ್ರಶಾಂತ್ ಭಂಡಾರ್ಕರ್ ಮಾಡಿ ತೋರಿಸಿದ್ದಾರೆ.
ರಾಮಮಂದಿರ ಶಿಲಾನ್ಯಾಸದಂದೇ ಗಡ್ಡ, ಕೂದಲಿಗೆ ಮುಕ್ತಿ!!
ಬುಧವಾರ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರುವ ಹಿನ್ನೆಲೆಯಲ್ಲಿ ಪ್ರಶಾಂತ್ ಭಂಡಾರ್ಕರ್ ಎಂಬುವವರು ನೇತ್ರಾವತಿ ನದಿಯಲ್ಲಿ ಮುಳುಗು ಹಾಕಿ ಗಡ್ಡ, ಮೀಸೆ ತಲೆಕೂದಲನ್ನು ತೆಗೆದು, ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ, ದೇವರಿಗೆ ಪ್ರಾರ್ಥಿಸಿ ರಾಮಮಂದಿರ ನಿರ್ವಿಘ್ನವಾಗಿ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿದರು.
ಇನ್ನು ಭಂಡಾರ್ಕರ್ ಗಡ್ಡ ಬಿಟ್ಟದ್ದು ಸುದ್ದಿಯಾಗಿದ್ದರೆ, ಗಡ್ಡ ತೆಗೆದು ದೇವಸ್ಥಾನಕ್ಕೆ ಸುತ್ತು ಬರುವ ವಿಡಿಯೋ ವೈರಲ್ ಆಯಿತು.