ETV Bharat / state

ನಾರಾಯಣ ಗುರು ತತ್ವ ಚಿಂತನೆಗೆ ವಿರುದ್ಧವಾದ ಪ್ರಣವಾನಂದರ ಪಾದಯಾತ್ರೆ ಬೆಂಬಲಿಸಬೇಡಿ: ಸ್ವಾಮಿ ಭದ್ರಾನಂದ - 6ರಂದು ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ

ಬಿಲ್ಲವ ಈಡಿಗ ಸಮುದಾಯದ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯ- ಪ್ರಣವಾನಂದ ಸ್ವಾಮೀಜಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಆಕ್ಷೇಪ- ಈ ಪಾದಯಾತ್ರೆ ಬೆಂಬಲಿಸದಂತೆ ನಾರಾಯಣ ಗುರುಗಳ ವಂಶಸ್ಥ ಸ್ವಾಮಿ ಭದ್ರಾನಂದ ಮನವಿ

Sri Swami Bhadrananda Swamiji
ಶ್ರೀ ಸ್ವಾಮಿ ಭದ್ರಾನಂದ ಸ್ವಾಮೀಜಿ
author img

By

Published : Jan 4, 2023, 5:14 PM IST

ಮಂಗಳೂರು: ಬಿಲ್ಲವ ಈಡಿಗ ಸಮುದಾಯಕ್ಕೆ ಸಂಬಂಧಿಸಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶ್ರೀ ಪ್ರಣವಾನಂದ ಸ್ವಾಮೀಜಿ ಅವರು ಜ.6ರಂದು ಮಂಗಳೂರಿನಿಂದ ಬೆಂಗಳೂರಿಗೆ ಕೈಗೊಂಡಿರುವ ಪಾದಯಾತ್ರೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಚಿಂತನೆಗೆ ವಿರುದ್ಧವಾಗಿದೆ. ಆದ್ದರಿಂದ ನಾರಾಯಣ ಗುರುಗಳ ತತ್ವಚಿಂತನೆ ಅನುಸರಿಸುವ ಯಾರೂ ಕೂಡ ಈ ಪಾದಯಾತ್ರೆ ಬೆಂಬಲಿಸಬೇಡಿ ಎಂದು ಶ್ರೀ ನಾರಾಯಣ ಗುರುಗಳ ವಂಶಸ್ಥ ಸ್ವಾಮಿ ಭದ್ರಾನಂದ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮದ್ಯಪಾನ, ಮದ್ಯ ಮಾರಾಟವನ್ನು ಬೆಂಬಲಿಸುವ ರೀತಿ ಪ್ರಣವಾನಂದ ಸ್ವಾಮೀಜಿ ಮಾತನಾಡುತ್ತಿದ್ದಾರೆ. ನಾರಾಯಣ ಗುರುಗಳು ಮದ್ಯಪಾನದ ವಿರೋಧಿಯಾಗಿದ್ದರು‌. ಆದರೆ ಅವರು ಶೇಂದಿ ಇಳಿಸುವುದನ್ನು ಪ್ರೋತ್ಸಾಹಿಸುವ ಮೂಲಕ ಬಿಲ್ಲವ ಸಮುದಾಯವನ್ನು ದಾರಿತಪ್ಪಿಸುವ ಕಾರ್ಯವನ್ನು ಪ್ರಣಾವನಂದ ಸ್ವಾಮೀಜಿ ಮಾಡುತ್ತಿದ್ದಾರೆ ಎಂದು ಅಪಾದಿಸಿದರು.

ಪ್ರಣವಾನಂದ ವಿರುದ್ಧ ಪ್ರಕರಣ: ಶ್ರೀ ಪ್ರಣವಾನಂದ ಸ್ವಾಮೀಜಿ ವಿರುದ್ಧ ಬಹಳಷ್ಟು ಪ್ರಕರಣಗಳು ದಾಖಲಾಗಿವೆ. ಆದರೆ ಸರ್ಕಾರ ಇವರ ಮೇಲೊಂದು ಕಣ್ಣೀಡಬೇಕು. ಮನಸ್ಸಿಗೆ ತಿಳಿದಂತೆ ಏನೇನೋ ಉಪದೇಶ ನೀಡಿ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಶ್ರೀ ಪ್ರಣವಾನಂದ ಸ್ವಾಮೀಜಿಗೆ ಶ್ರೀನಾರಾಯಣ ಗುರುಗಳ ಪರಂಪರೆಯ ಹಿನ್ನೆಲೆ ಇಲ್ಲ ಎಂದು ಸ್ವಾಮಿ ಭದ್ರಾನಂದ ಹೇಳಿದರು. ಪ್ರತಿ ವರ್ಷ 20ಮಂದಿ ಮದ್ಯ ಸೇವನೆಯಿಂದ ಮೃತರಾಗುತ್ತಿದ್ದಾರೆ. ನಿರುದ್ಯೋಗ, ಕುಡಿಯುವ ನೀರು, ಬಡತನ, ಕೃಷಿ ಹೀಗೆ ಇನ್ನಿತರ ಸಮಸ್ಯೆಗಳ ನಿವಾರಣೆಗೆ ಕುರಿತಾಗಿ ಅವರು ಪಾದಯಾತ್ರೆ ಮಾಡಬಹುದು. ಅದೇ ರೀತಿ ಮದ್ಯಸೇವನೆ ನಿಲ್ಲಿಸಲು ಪಾದಯಾತ್ರೆ ಮಾಡಿದ್ದರೆ ಅದು ಉತ್ತಮ ಕಾರ್ಯವಾಗುತ್ತಿತ್ತು‌‌. ಆದರೆ ಪ್ರಣವಾನಂದ ಸ್ವಾಮೀಜಿ ಅವರು ಶೇಂದಿ ಇಳಿಸಲು ಸರ್ಕಾರ ಅವಕಾಶ ಕೊಡಬೇಕೆಂದು ಎಂದು ಬೇಡಿಕೆಯಿಟ್ಟು ಬಿಲ್ಲವ ಸಮುದಾಯವನ್ನು ವಂಚಿಸುವುದಲ್ಲದೇ, ಕಾವಿಗೂ ಕಳಂಕವನ್ನು ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ವಾಮೀಜಿಯಾಗಿ ತಮಗೇಕೆ ಭದ್ರತಾ ಸಿಬ್ಬಂದಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ತಾತ ಬ್ರಹ್ಮಶ್ರೀ ನಾರಾಯಣ ಗುರು ಪರಂಪರೆಯವರು. ಅವರು ನಾರಾಯಣ ಗುರುಗಳ ಜತೆಗೆ ಇದ್ದವರು. ಆದರೆ ನಾನು ನಾರಾಯಣ ಗುರುಗಳ ತತ್ವ ಚಿಂತನೆಯನ್ನು ಅನುಸರಿಸುತ್ತಿರುವೆ. ಆದರೂ ನಾಗಸಾಧು ಪರಂಪರೆಯವನಾಗಿದ್ದೇನೆ ಎಂದು ಹೇಳಿದರು. ನಾನು ಕೇರಳದಲ್ಲಿ ಪಿಎಫ್ಐ ಸಂಘಟನೆಯ ದೇಶವಿರೋಧಿ ಕೃತ್ಯವನ್ನು, ಡ್ರಗ್ಸ್ ಮಾಫಿಯಾವನ್ನು ವಿರೋಧಿಸಿದ್ದೇನೆ. ನನ್ನ ಮೇಲೆ ಹಲವಾರು ಹತ್ಯಾ ಯತ್ನಗಳು ನಡೆದಿವೆ. ಸನ್ಯಾಸಿ ಕೇವಲ ಮಠ ಕಟ್ಟಿಕೊಂಡು ಧ್ಯಾನ, ಪ್ರವಚನ ಮಾತ್ರ ಮಾಡುವುದಲ್ಲ. ರಾಷ್ಟ್ರದ ವಿಚಾರದಲ್ಲೂ ಚಿಂತನೆಯುಳ್ಳವನಾಗಬೇಕು ಎಂದು ಅವರು ಸಲಹೆ ನೀಡಿದರು.

ಪ್ರಣವಾನಂದ ಸ್ವಾಮೀಜಿ ಬೇಡಿಕೆ ಏನು: ಈಡಿಗ ಬಿಲ್ಲವ ಸಮುದಾಯಕ್ಕೆ ರಾಜ್ಯದಲ್ಲಿ ಅನ್ಯಾಯ ಆಗುತ್ತಿದೆ. ನಮ್ಮ ಕುಲಕಸುಬು ಸೇಂದಿ ಇಳಿಸುವುದು. ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಈಗಲೂ ಸೇಂದಿ ಇದೆ. ಬೇರೆ ಜಿಲ್ಲೆಗಳಲ್ಲಿ ನಮ್ಮ ಕುಲಕಸುಬು ಯಾಕೆ ನಿಲ್ಲಿಸಿದ್ದೀರಿ. ಕಲಬುರಗಿ, ರಾಯಚೂರು ಸೇರಿದಂತೆ ಹಲವು ಭಾಗಗಳಲ್ಲಿ ಸೇಂದಿಗೆ ಅವಕಾಶ ಕೊಡಬೇಕು ಹಾಗೂ ಬಿಲ್ಲವ ಈಡಿಗ ಸಮುದಾಯಕ್ಕೆ ಸಂಬಂಧಿಸಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶ್ರೀ ಪ್ರಣವಾನಂದ ಸ್ವಾಮೀಜಿ ಅವರು ಜ 6ರಂದು ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳವುದಾಗಿ ಇತ್ತೀಚೆಗೆ ತಿಳಿಸಿದ್ದರು. ಈಡಿಗ ಬಿಲ್ಲವ ಸಮಾಜದ ಎಲ್ಲ ಪ್ರಮುಖರು ಪಾದಯಾತ್ರೆಯಲ್ಲಿ ಭಾಗವಹಿಸಬೇಕೆಂದು ಅವರು ಕರೆ ಕೊಟ್ಟಿದ್ದರು.

ಇದನ್ನೂಓದಿ:ಇರುಮುಡಿ ಹೊತ್ತು ತಮಿಳುನಾಡಿನ ದೇವಸ್ಥಾನಕ್ಕೆ ಹೊರಟ ಕಾಫಿನಾಡಿನ ಭಕ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.