ಮಂಗಳೂರು: ಕರ್ತವ್ಯದಲ್ಲಿರುವಾಗಲೇ ಅಪಘಾತದಲ್ಲಿ ಮೃತಪಟ್ಟ ಮುಲ್ಕಿ ಪೊಲೀಸ್ ಠಾಣೆಯ ಹೋಮ್ಗಾರ್ಡ್ ಕುಟುಂಬಕ್ಕೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಸಂಗ್ರಹವಾದ 5.26 ಲಕ್ಷ ರೂ. ಮೊತ್ತವನ್ನು ಇಂದು ಹಸ್ತಾಂತರಿಸಿದ್ದಾರೆ.
ಜೂ.30ರಂದು ಉಡುಪಿಯ ಅಜ್ಜರಕಾಡು ಬಳಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ರಾಕೇಶ್ ಅವರಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಮರುದಿನ ಆಸ್ಪತ್ರೆಯಲ್ಲಿ ಸಾವನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಘಟಕವಾರು ಪರಿಹಾರ ಮೊತ್ತ ಸಂಗ್ರಹಿಸಿ ಮೃತ ಹೋಮ್ಗಾರ್ಡ್ ರಾಜೇಶ್ ಕುಟುಂಬಸ್ಥರಿಗೆ ನೀಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಎಸಿಪಿ ನಟರಾಜ್ ಇನ್ನಿತರ ಪೊಲೀಸ್ ಅಧಿಕಾರಿಗಳು ಇಂದು ಅವರ ಮನೆಗೆ ಭೇಟಿ ನೀಡಿ ಪರಿಹಾರದ ಮೊತ್ತವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ: Black Fungus: ದೃಷ್ಟಿ ಕಳೆದುಕೊಂಡಿದ್ದ ಚಿತ್ರದುರ್ಗದ 11 ವರ್ಷದ ಬಾಲಕ ಸಾವು