ನೆಲ್ಯಾಡಿ: ರಸ್ತೆಯಲ್ಲಿ ಹಸಿವಿನಿಂದ ಸಂಚರಿಸುತ್ತಿದ್ದ ಭಿಕ್ಷುಕನೋರ್ವನನ್ನು ಉಪಚರಿಸಿ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ರಸ್ತೆಯಲ್ಲಿ ಹಸಿವೆಂದು ಸಂಚರಿಸುತ್ತಿದ್ದ ಭಿಕ್ಷುಕನನ್ನು ಗಮನಿಸಿದ ಕೂಡಲೇ ನೆಲ್ಯಾಡಿ ಹೆಡ್ ಕಾನ್ಸ್ಟೇಬಲ್ ಹರಿಶ್ಚಂದ್ರ ಸೇರಿದಂತೆ ನೆಲ್ಯಾಡಿ ಹೊರ ಠಾಣೆಯ ಪೊಲೀಸ್ ಸಿಬ್ಬಂದಿ ಆತನ ಮುಖಕ್ಕೆ ಮಾಸ್ಕ್ ಹಾಕಿಸಿ, ಹಣ್ಣು, ಉಪಹಾರ ನೀಡಿದ್ರು.
ಕರ್ತವ್ಯದ ನಡುವೆ ನಿರ್ಗತಿಕರಿಗೆ ಸಹಾಯ ಮಾಡುವುದರೊಂದಿಗೆ ಪೊಲೀಸರು ಮಾನವೀಯತೆ ಮೆರೆದರು.