ETV Bharat / state

ಮಂಗಳೂರಿನಲ್ಲಿ ವಿದೇಶಿಗರ ಅನಧಿಕೃತ ವಾಸ: ಇಬ್ಬರ ಬಂಧನ, ಡಿಟೆನ್ಷನ್ ಸೆಂಟರ್​ಗೆ ರವಾನೆ - ಈಟಿವಿ ಭಾರತ ಕರ್ನಾಟಕ

ಮಂಗಳೂರಿನಲ್ಲಿ ಅನಧಿಕೃತವಾಗಿ ನೆಲೆಸಿದ್ದ ಇಬ್ಬರು ವಿದೇಶಿಗರನ್ನು ಪೊಲೀಸರು ಬಂಧಿಸಿದ್ದಾರೆ.

Etv Bharatpolice-arrested-two-foreigners-who-were-staying-illegally-in-mangalore
ಮಂಗಳೂರಿನಲ್ಲಿ ವಿದೇಶಿಗರ ಅನಧಿಕೃತ ವಾಸ: ಇಬ್ಬರು ಬಂಧಿಸಿ ಡಿಟೆನ್ಷನ್ ಸೆಂಟರ್​ಗೆ ರವಾನೆ
author img

By ETV Bharat Karnataka Team

Published : Oct 22, 2023, 10:35 PM IST

ಮಂಗಳೂರು: ವಿದೇಶದಿಂದ ಬಂದು ಅನಧಿಕೃತವಾಗಿ ಮಂಗಳೂರಿನಲ್ಲಿ ವಾಸಿಸುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನೈಜೀರಿಯದ ಅಂಕಿಟೋಲ ಮತ್ತು ಗಾನದ ಸಲಾಂ ಕ್ರಿಶ್ಚಿಯನ್ ಬಂಧಿತರು. ಇವರಿಬ್ಬರು ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದರು. ಇವರ ಗೆಳೆಯ ಅನಿಲ್ ಡಿಸಿಲ್ವಾ ಎಂಬಾತನ ಮನೆಯ ಕಾರ್ಯಕ್ರಮಕ್ಕೆಂದು ವಿದೇಶದಿಂದ ಬಂದಿದ್ದರು.

ಮಂಗಳೂರಿಗೆ ಬಂದಿದ್ದ ಇವರು ತಮ್ಮ ವೀಸಾದ ಅವಧಿ ಮುಗಿದಿದ್ದರೂ ತಮ್ಮ ದೇಶಕ್ಕೆ ತೆರಳದೆ ಭಾರತದಲ್ಲೇ ವಾಸವಾಗಿದ್ದರು. ಇವರನ್ನು ಬಂಧಿಸಿ ಬೆಂಗಳೂರಿನ FRRO (Foreigners Regional Registration Office) ಮುಂದೆ ಹಾಜರುಪಡಿಸಲಾಗಿದ್ದು, ಡಿಟೆನ್ಷನ್ ಸೆಂಟರ್‌ಗೆ ರವಾನಿಸಲು ಆದೇಶಿಸಲಾಗಿದೆ.

ಇದನ್ನೂ ಓದಿ: ರವಿಕೆ, ಡ್ರೈ ಫ್ರೂಟ್ಸ್, ಗುದನಾಳದಲ್ಲಿಟ್ಟು ಚಿನ್ನ ಸಾಗಾಟ: ₹67 ಲಕ್ಷ ಮೌಲ್ಯದ 1 ಕೆ.ಜಿ ಚಿನ್ನ ವಶಕ್ಕೆ, ಮೂವರು ಸೆರೆ

ತಮಿಳುನಾಡಿನ ಕುಖ್ಯಾತ ಆರೋಪಿ NIA ಬಲೆಗೆ: ಶ್ರೀಲಂಕಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಬೆಂಗಳೂರಿನ ಎಟಿಟಿ (Absconder Tracking Team -ATT) ಅಧಿಕಾರಿಗಳು ಬಂಧಿಸಿದ್ದಾರೆ. ಮೊಹಮ್ಮದ್ ಇಮ್ರಾನ್ ಖಾನ್ ಹಾಜಾ ನಜರ್​​ಭೀಡೆನ್ ಎಂಬಾತನೇ ಬಂಧಿತ. 2021ರಲ್ಲಿ ಅಧಿಕೃತ ಹಾಗೂ ಮಾನ್ಯ ದಾಖಲೆಗಳಿಲ್ಲದೆ ಶ್ರೀಲಂಕಾ ಪ್ರಜೆಗಳ ಗುಂಪೊಂದು ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿತ್ತು. ಈ ಸಂಬಂಧ ಗುಪ್ತಚರ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸರು ಕಾರ್ಯಾಚರಣೆ ನಡೆಸಿ, 38 ಶ್ರೀಲಂಕಾ ಪ್ರಜೆಗಳನ್ನು ಅದೇ ವರ್ಷದ ಜೂನ್​ 6ರಂದು ಬಂಧಿಸಿದ್ದರು. ಇವರನ್ನು ಅಕ್ರಮವಾಗಿ ತಮಿಳುನಾಡು ಮತ್ತು ಬೆಂಗಳೂರು ಮೂಲಕ ಮಂಗಳೂರಿಗೆ ಕರೆತರಲಾಗಿತ್ತು ಎಂದು ತನಿಖೆಯಲ್ಲಿ ಬಯಲಾಗಿತ್ತು.

ಪ್ರಕರಣದ ಅಂತರರಾಷ್ಟ್ರೀಯ ಆಯಾಮಗಳನ್ನು ಗುರುತಿಸಿ, ಎನ್​ಐಎ ಮರು ತನಿಖೆ ಕೈಗೊಂಡಿತ್ತು. ಈ ಸಂದರ್ಭದಲ್ಲಿ ತಮಿಳುನಾಡಿನ ರಾಮನಾಥಪುರಂ ನಿವಾಸಿಯಾದ ಇಮ್ರಾನ್ ಖಾನ್ ಈ ಪ್ರಕರಣದ ಪ್ರಮುಖ ಆರೋಪಿ ಎಂದೂ ಪತ್ತೆ ಹಚ್ಚಲಾಗಿತ್ತು. ಆದರೆ, ಅಂದಿನಿಂದಲೂ ಈತ ಪರಾರಿಯಾಗಿದ್ದ. ಹೀಗಾಗಿ ಕಳೆದ ಹಲವು ತಿಂಗಳುಗಳಿಂದ ಆತನ ಚಲನವಲನಗಳ ಮೇಲೆ ಬೆಂಗಳೂರಿನ ಎಟಿಟಿ ನಿಗಾ ಇರಿಸಿತ್ತು. ಇದೀಗ ತಮಿಳುನಾಡಿನ ಥೇಣಿ ಜಿಲ್ಲೆಯ ಅಜ್ಞಾತ ಸ್ಥಳದಿಂದ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಅಲ್ಲದೇ, ದೀರ್ಘಕಾಲದಿಂದಲೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ಕುಖ್ಯಾತ ಕಳ್ಳಸಾಗಾಣಿಕೆದಾರ ಎಂಬುದಾಗಿಯೂ ತಿಳಿದು ಬಂದಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಆರೋಪಿ ಇಮ್ರಾನ್ ಖಾನ್ ಈ ಹಿಂದೆ ಎಲ್‌ಟಿಟಿಇಯೊಂದಿಗೆ ನಂಟು ಹೊಂದಿದ್ದ ಶ್ರೀಲಂಕಾದ ಪ್ರಜೆ ಈಸನ್‌ನ ಸಹಯೋಗದೊಂದಿಗೆ 38 ಶ್ರೀಲಂಕಾ ಪ್ರಜೆಗಳನ್ನು ಅವರ ತಾಯ್ನಾಡಿನಿಂದ ತಮಿಳುನಾಡಿನ ವಿವಿಧ ಸ್ಥಳಗಳಿಗೆ ಅಕ್ರಮವಾಗಿ ಸಾಗಿಸಲು ಯೋಜನೆ ರೂಪಿಸಿದ್ದ ಎಂಬುದು ಬಹಿರಂಗವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.