ETV Bharat / state

ವಿಟ್ಲದಲ್ಲಿ ಮನೆ ಕಳ್ಳತನದ ಆರೋಪಿ ಬಂಧನ - ಆರೋಪಿ ಬಂಧನ

ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ಆಪಾದಿತನಿಂದ ಸುಮಾರು 140 ಗ್ರಾಂ. ಚಿನ್ನಾಭರಣ ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

Police arrested accused
author img

By

Published : Sep 28, 2019, 5:19 AM IST

ಮಂಗಳೂರು : ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಮಲಪ್ಪುರಂ‌ ಜಿಲ್ಲೆಯ ನೀಲಂಬೂರು ತಾಲೂಕಿನ ವಂಡೂರು ಗ್ರಾಮದ ರಮ್ಶೀದ್ (32) ಬಂಧಿತ ಆರೋಪಿ. ಈತ ಜು.02 ರಂದು ಪೆರಾಜೆ ಗ್ರಾಮದ ಗಡಿಯಾರ ಎಂಬಲ್ಲಿ ಮುಹಮ್ಮದ್ ರಫೀಕ್ ಎಂಬವರ ಮನೆಯಲ್ಲಿ 19.5 ಲಕ್ಷ ರೂ. ನಗದು ಮತ್ತು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದರು. ಬಂಧಿತನಿಂದ ಸುಮಾರು 140 ಗ್ರಾಂ. ಚಿನ್ನಾಭರಣ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Intro:ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಮನೆಕಳವು ಪ್ರಕರಣದ ಆರೋಪಿಯೋರ್ವನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
Body:ಕೇರಳದ ಮಲಪ್ಪುರಂ‌ ಜಿಲ್ಲೆಯ ನೀಲಂಬೂರು ತಾಲೂಕಿನ ವಂಡೂರು ಗ್ರಾಮದ ರಮ್ಶೀದ್ (32) ಬಂಧಿತ ಆರೋಪಿ.
ಈತ ಜುಲೈ 2 ರಂದು ಪೆರಾಜೆ ಗ್ರಾಮದ ಗಡಿಯಾರ ಎಂಬಲ್ಲಿ ಮುಹಮ್ಮದ್ ರಫೀಕ್ ಎಂಬವರ ಮನೆಯಲ್ಲಿ ರೂ 19.5 ಲಕ್ಷ ರೂ ನಗದು ಮತ್ತು 7 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವುಗೈದಿದ್ದ. ಬಂಧಿತ ಕಳ್ಳನಿಂದ 140 ಗ್ರಾಂ ಚಿನ್ನಾಭರಣ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ವಿಟ್ಲ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.
Reporter: vinodpuduConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.