ಮಂಗಳೂರು : ಕೊರೊನಾ ಸೋಂಕಿನಿಂದ ಗುಣಮುಖರಾದ ಮಂಗಳೂರಿನ ಮೂವರು ಪೊಲೀಸ್ ಕಾನ್ಸ್‌ಟೇಬಲ್‌ಗಳು ಪ್ಲಾಸ್ಮಾ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
![Plasma donation from police staff in Mangaluru](https://etvbharatimages.akamaized.net/etvbharat/prod-images/kn-mng-02-plasma-photo-7202146_11092020162356_1109f_1599821636_1006.jpg)
ವೈದ್ಯರ ಸಲಹೆ ಮೇರೆಗೆ ಕೆಲ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗಬೇಕಾದ ರೋಗಿಗೆ ಅಗತ್ಯ ಪ್ಲಾಸ್ಮಾ ದೊರೆಯುವುದು ಕಷ್ಟಕರ. ಕೊರೊನಾದಿಂದ ಗುಣಮುಖರಾದವರಿಂದ ಪ್ಲಾಸ್ಮಾ ಪಡೆದು ಈ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಮಂದಿ ಪ್ಲಾಸ್ಮಾ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಮಂಗಳೂರಿನ ಮೂವರು ಪೊಲೀಸ್ ಸಿಬ್ಬಂದಿ ಕೊರೊನಾದಿಂದ ಗುಣಮುಖರಾದ ಬಳಿಕ ಪ್ಲಾಸ್ಮಾ ದಾನ ಮಾಡಿದ್ದಾರೆ.
![Plasma donation from police staff in Mangaluru](https://etvbharatimages.akamaized.net/etvbharat/prod-images/kn-mng-02-plasma-photo-7202146_11092020162356_1109f_1599821636_961.jpg)
ಡಿಎಆರ್ ಹೆಡ್ಕಾನ್ಸ್ಟೇಬಲ್ ರಂಜಿತ್ ರೈ, ಸಿಸಿಬಿ ಹೆಡ್ಕಾನ್ಸ್ಟೇಬಲ್ಗಳಾದ ಸುಧೀರ್ ಕುಮಾರ್ ಹಾಗೂ ಮಣಿ ಎಂಬುವರು ಪ್ಲಾಸ್ಮಾ ದಾನ ಮಾಡಿದವರು. ನಗರದ ಜಸ್ಟೀಸ್ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ಪ್ಲಾಸ್ಮಾ ಸಂಗ್ರಹಣಾ ಕೇಂದ್ರ ಆರಂಭವಾಗಿದೆ. ಇದು ಜಿಲ್ಲೆಯ ಮೊದಲ ಪ್ಲಾಸ್ಮಾ ಸಂಗ್ರಹಣಾ ಕೇಂದ್ರ. ಅದು ಆರಂಭವಾದ ಕೂಡಲೇ ಈ ಪೊಲೀಸರು ಪ್ಲಾಸ್ಮಾ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
![Plasma donation from police staff in Mangaluru](https://etvbharatimages.akamaized.net/etvbharat/prod-images/kn-mng-02-plasma-photo-7202146_11092020162356_1109f_1599821636_1083.jpg)