ETV Bharat / state

ಕಡಲ್ಕೊರೆತ ತಡೆಯಲು ಶಾಶ್ವತ ಪರಿಹಾರಕ್ಕೆ ಯೋಜನೆ.. ಸಂಸದ ನಳಿನ್‌ಕುಮಾರ್‌ ಕಟೀಲ್‌

ಕಡಲ್ಕೊರೆತ ತಡೆಯಲು ಶಾಶ್ವತ ಪರಿಹಾರಕ್ಕಾಗಿ ಯೋಜನೆಯನ್ನು ರೂಪಿಸಲು ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಎಲ್ಲವೂ ಸರಿ ಹೋಗಲಿದೆ ಎಂದು ಸಂಸದ ನಳೀನ್​ ಕುಮಾರ್​ ಕಟೀಲ್​ ಹೇಳಿದ್ದಾರೆ.

author img

By

Published : Aug 9, 2019, 10:48 AM IST

ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಯೋಜನೆ ಸಂಸದ ನಳಿನ್

ಮಂಗಳೂರು: ಕಡಲ್ಕೊರೆತ ತಡೆಯಲು ಶಾಶ್ವತ ಪರಿಹಾರಕ್ಕಾಗಿ ಯೋಜನೆಯನ್ನು ರೂಪಿಸಲು ಅನುದಾನ ಬಿಡುಗಡೆಯಾಗಿದ್ದು,ಶೀಘ್ರದಲ್ಲೇ ಎಲ್ಲವೂ ಸರಿ ಹೋಗಲಿದೆ ಎಂದು ಸಂಸದ ಸಂಸದ ನಳೀನ್‌ಕುಮಾರ್​ ಕಟೀಲ್​ ಹೇಳಿದ್ದಾರೆ.

ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಯೋಜನೆ ಸಂಸದ ನಳಿನ್

ನಗರದ ಉಳ್ಳಾಲದ ಸೋಮೇಶ್ವರ ಉಚ್ಚಿಲ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಉಳ್ಳಾಲದಿಂದ ಕಾಮಗಾರಿ ಪ್ರಾರಂಭವಾಗಿದೆ. ವೈಜ್ಞಾನಿಕವಾದ ಕಾಮಗಾರಿ ನಡೆಯಬೇಕಾಗಿದ್ದು, ತಜ್ಞರಿಂದ ಮಾಹಿತಿ ಪಡೆದು ವರ್ಷ ವರ್ಷ ಬದಲಾಯಿಸುವ ಕೆಲಸ ಆಗುತ್ತಿದೆ. ಕಳೆದ ಬಾರಿ ನಮಗೆ ರಾಜ್ಯ ಸರ್ಕಾರ ಅಷ್ಟೊಂದು ಸಹಕಾರ ನೀಡಿಲ್ಲ. ಈ ಬಾರಿ ನಮ್ಮದೇ ಸರ್ಕಾರವಿದ್ದು, ವರದಿಗಳನ್ನು ಮುಖ್ಯಮಂತ್ರಿಗಳಿಗೆ ನೀಡಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಒಳ್ಳೆಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಆದೇಶದ ಮೇರೆಗೆ ನಾನು ಹಾಗೂ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಈ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಅಧಿಕಾರಿಗಳಿಂದ ಹಾಗೂ ಇಲ್ಲಿನ ಜನರಲ್ಲಿ ಮಾತನಾಡಿ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ನೀಡುತ್ತೇವೆ. ಇಲ್ಲಿಗೆ ಅಧಿಕಾರಿಗಳನ್ನು ನಿಯೋಜನೆ ಮಾಡಿ ತುರ್ತು ಕ್ರಮಗಳಾಗಬೇಕು. ಅದಕ್ಕೆ ಕೋಟ ಶ್ರೀನಿವಾಸ ಪೂಜಾರಿಯವರು ಈಗಾಗಲೇ ಆದೇಶ ನೀಡಿದ್ದು, ಅಧಿಕಾರಿಗಳು ಪರಿಹಾರ ಕಾರ್ಯವನ್ನು ಮಾಡುತ್ತಾರೆ ಎಂದು ನಳಿನ್ ಕುಮಾರ್ ಹೇಳಿದರು.

Intro:ಮಂಗಳೂರು: ನಗರದ ಉಳ್ಳಾಲದ ಸೋಮೇಶ್ವರ ಉಚ್ಚಿಲ ಕಡಲ್ಕೊರೆತ ಪ್ರದೇಶಗಳಿಗೆ ದ.ಕ.ಜಿಲ್ಲೆಯ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲು ಹಾಗೂ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ನಳಿನ್ ಕುಮಾರ್ ಕಟೀಲು‌ ಮಾತನಾಡಿ, ಈ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಉಳ್ಳಾಲದಿಂದ ಕಾಮಗಾರಿ ಪ್ರಾರಂಭವಾಗಿದೆ. ವೈಜ್ಞಾನಿಕವಾದ ಕಾಮಗಾರಿ ನಡೆಯಬೇಕಾಗಿದೆ ಆದ್ದರಿಂದ ತಜ್ಞರಿಂದ ಮಾಹಿತಿ ಪಡೆದು ವರ್ಷ ವರ್ಷ ಬದಲಾಯಿಸುವ ಕೆಲಸ ಆಗುತ್ತಿದೆ. ಕಳೆದ ಬಾರಿ ನಮಗೆ ರಾಜ್ಯ ಸರಕಾರ ಅಷ್ಟೊಂದು ಸಹಕಾರ ನೀಡಿಲ್ಲ. ಈ ಬಾರಿ ನಮ್ಮದೇ ಯಡಿಯೂರಪ್ಪನವರ ಸರಕಾರವಿದೆ. ಇಲ್ಲಿನ ಎಲ್ಲಾ ವರದಿಗಳನ್ನು ಮುಖ್ಯಮಂತ್ರಿ ಗಳಿಗೆ ನೀಡಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಒಳ್ಳೆಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಆದೇಶದ ಮೇರೆಗೆ ನಾನು ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರು ಈ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಅಧಿಕಾರಿಗಳಿಂದ ಹಾಗೂ ಇಲ್ಲಿನ ಜನರಲ್ಲಿ ಮಾತನಾಡಿ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿ ವರದಿಯನ್ನು ಮಾಡುತ್ತೇವೆ. ಇಲ್ಲಿಗೆ ಅಧಿಕಾರಿಗಳನ್ನು ನಿಯೋಜನೆ ಮಾಡಿ ತುರ್ತುಕ್ರಮಗಳಾಗಬೇಕು. ಅದಕ್ಕೆ ಕೋಟ ಶ್ರೀನಿವಾಸ ಪೂಜಾರಿಯವರು ಈಗಾಗಲೇ ಆದೇಶ ನೀಡಿದ್ದಾರೆ. ಆ ಮೂಲಕ ಅಧಿಕಾರಿಗಳು ಪರಿಹಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಳಿನ್ ಕುಮಾರ್ ಹೇಳಿದರು.

ಕೊಡಗು, ಉಡುಪಿ ಹಾಗೂ ದ.ಕ‌. ಜಿಲ್ಲೆಯ ಅತಿವೃಷ್ಟಿ ಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ನಾವು ಪ್ರವಾಸ ಕೈಗೊಳ್ಳಲಿದ್ದು ಬಳಿಕ ಎರಡು ರೀತಿಯ ವರದಿಯನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ. ಅಲ್ಲಿ ಅತಿವೃಷ್ಟಿಯಿಂದ ಆದ ಸಮಸ್ಯೆಗಳೇನು, ತುರ್ತಾಗಿ ನಡೆಯಬೇಕಾದ ಪರಿಹಾರ ಯಾವುದು, ಅಂದಾಜು ನಷ್ಟಗಳೆಷ್ಟು ಎಂಬುದರ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ‌.‌ ಅವರ ವರದಿಯನ್ನು ನೋಡಿ ನಷ್ಟ ಹಾಗೂ ತುರ್ತಾಗಿ ನಡೆಯಬೇಕಾದ ಪರಿಹಾರ ಕಾರ್ಯವನ್ನು ಸರಕಾರ ಕೈಗೆತ್ತಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಇಂತಹ ಪ್ರದೇಶಗಳಿಗೆ ಭೇಟಿ ನೀಡಬೇಕೆಂದು ಸೂಚನೆ ನೀಡಿದ್ದಾರೆ. ಗಂಜಿ ಕೇಂದ್ರಗಳ ಅನಿವಾರ್ಯತೆ ಇದ್ದಲ್ಲಿ ಅದನ್ನು ತೆರೆಯಲಾಗುತ್ತದೆ. ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಕುಸಿದು ಸಮಸ್ಯೆಗಳಾಗಿವೆ. ಅವುಗಳಿಗೂ ಪರಿಹಾರ ನೀಡಲಾಗುವುದು ಎಂದು ನಳಿನ್ ಕುಮಾರ್ ಹೇಳಿದರು.

Body:ರಾಜ್ಯದ 15 ಜಿಲ್ಲೆಗಳಲ್ಲಿ ಪ್ರವಾಹದಂತಹ ಭೀಕರ ಪರಿಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನವರು ನಾಲ್ಕು ವಿಶೇಷ ತಂಡಗಳನ್ನು ಮಾಡಿ ಸಂಕಷ್ಟ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ನೆರವನ್ನು ನೀಡಲು ಆದೇಶ ನೀಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಯವರೇ ಬೆಳಗಾವಿಯಲ್ಲಿ ಇದ್ದುಕೊಂಡು ಅಲ್ಲಿನ ಸಮಸ್ಯೆಗಳನ್ನು ಕುರಿತು ಅಧ್ಯಯನ ಮಾಡಿ ಪರಿಹಾರ ನೀಡುತ್ತಿದ್ದಾರೆ. ಮತ್ತೊಂದು ತಂಡದಲ್ಲಿ ಈಶ್ವರಪ್ಪ ಹಾಗೂ ಇನ್ನೊಂದು ತಂಡದಲ್ಲಿ ಜಗದೀಶ್ ಶೆಟ್ಟರ್ ಇದ್ದಾರೆ. ಮತ್ತೊಂದು ತಂಡದಲ್ಲಿ ಶೋಭಾ ಕರಂದ್ಲಾಜೆ ಇದ್ದಾರೆ. ಆ ಜವಾಬ್ದಾರಿ ಯ ಮೇರೆಗೆ ನಾನು ನಳಿನ್ ಕುಮಾರ್ ಮಂಗಳೂರಿನ ಅತಿವೃಷ್ಟಿ ಯಿಂದ ಹಾನಿಗೊಳಗಾದ ಪ್ರತಿಯೊಂದು ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇವೆ‌. ಉಳ್ಳಾಲದ ಈ ಬೆಟ್ಟಂಪಾಡಿ ಪ್ರದೇಶದಲ್ಲಿ ತೀವ್ರವಾದ ಕಡಲ್ಕೊರೆತ ವಿದೆ. ನೂರು ಮೀಟರ್ ಗಿಂತಲೂ ಈಚೆಗೆ ಕಡಲುಕೊರೆದುಕೊಂಡು ಈಚೆ ಬಂದಿದೆ. ವಿಪತ್ತುದಳವನ್ನು ಸುಸಜ್ಜಿತವಾಗಿ ಸನ್ನದ್ಧವಾಗಿ ಇಡಲಾಗಿದೆ. ಎರಡು ಎನ್ ಡಿಆರ್ ಎಫ್ ತಂಡವನ್ನು ಮುನ್ನೆಚ್ಚರಿಕಾ ದೃಷ್ಟಿಯಿಂದ ಇರಿಸಲಾಗಿದೆ. ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡಾ ಜನಸಾಮಾನ್ಯರಿಗೆ ಕಷ್ಟವಾಗದ ರೀತಿಯಲ್ಲಿ ರುವಂತೆ ಕಾರ್ಯಯೋಜನೆ ಹಾಕಿಕೊಂಡಿದ್ದೇವೆ. ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ತುರ್ತಾಗಿ ಕಡಲಂಚಿನಲ್ಲಿ ಕಲ್ಲು ಇಡುವಂತಹ ಕಾರ್ಯವನ್ನು ಮಾಡುತ್ತಿದ್ದೇವೆ. ಇಡೀ ರಾಜ್ಯದಲ್ಲಿ ಯಡಿಯೂರಪ್ಪ ನವರ ಸರಕಾರ ಪ್ರವಾಹ ಹಾಗೂ ಅತಿವೃಷ್ಟಿ ಯನ್ನು ಎದುರಿಸಲು ಸಜ್ಜಾಗಿ ನಿಂತಿದೆ.

ಈ ಸಂದರ್ಭ ಮಂಗಳೂರು ಮನಪಾ ಉಪ ಆಯುಕ್ತೆ ಗಾಯತ್ರಿ ನಾಯಕ್, ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಶಂಕರ್, ಬಿಜೆಪಿ ಮುಖಂಡರಾದ ಸಂತೋಷ್ ಶೆಟ್ಟಿ ಬೋಳಿಯಾರ್, ಹರಿಕೃಷ್ಣ ಬಂಟ್ವಾಳ ಮತ್ತಿತರರು ಜೊತೆಗಿದ್ದರು.

Reporter_Vishwanath Panjimogaru

Conclusion:byte

ಕಪ್ಪಿನವರು ಕೋಟ ಶ್ರೀನಿವಾಸ ಪೂಜಾರಿ

ಪಿಂಕ್ ಅಂಗಿಯವರು ನಳಿನ್ ಕುಮಾರ್ ಕಟೀಲು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.