ಬಂಟ್ವಾಳ: ಹೊಳೆಯಿಂದ ಮರಳು ಸಂಗ್ರಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಪಡೆದ ವಿಟ್ಲ ಪ್ರಭಾರ ಎಸೈ ರಾಜೇಶ್ ಕೆ.ವಿ ನೇತೃತ್ವದ ಪೊಲೀಸರ ತಂಡ, ದಾಳಿ ನಡೆಸಿ ಬೋಟು ಹಾಗೂ ಯಂತ್ರವನ್ನು ವಶಪಡಿಸಿಕೊಂಡ ಘಟನೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ನಡೆದಿದೆ.
ಕೊಳ್ನಾಡು ಗ್ರಾಮದ ಕುಡ್ತಮುಗೇರು ಭಾಗದಲ್ಲಿ ಹಾದು ಹೋಗುವ ಹೊಳೆಯಿಂದ ಕಳೆದ ಕೆಲವು ದಿನಗಳಿಂದ ಪಿಕಪ್ ಮೊದಲಾದ ವಾಹನಗಳ ಮೂಲಕ ಮರಳು ಸಂಗ್ರಹಿಸಿ, ಸಾಗಾಟ ಮಾಡುತ್ತಿದ್ದರು. ಇದೀಗ ಡ್ರಜ್ಜಿಂಗ್ ಮೆಷಿನ್ ಮೂಲಕ ಹೊಳೆಯಿಂದ ಮರಳು ಸಂಗ್ರಹಿಸಲು ಪ್ಲ್ಯಾನ್ ಮಾಡಲಾಗಿತ್ತು. ಅದರಂತೆ ಮರಳು ಸಂಗ್ರಹಿಸಲು ಬೋಟು ಮತ್ತು ಯಂತ್ರವನ್ನು ತಂದು ಇಲ್ಲಿ ಇಟ್ಟಿದ್ದರು. ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವಸ್ತುಗಳು ಯಾರಿಗೆ ಸಂಬಂಧಿಸಿದವು ಎಂಬ ಬಗ್ಗೆಹಾಗೂ ಆರೋಪಿಗಳ ಬಗ್ಗೆ ಇನ್ನೂ ಕೂಡ ಮಾಹಿತಿ ತಿಳಿದುಬಂದಿಲ್ಲ.