ETV Bharat / state

ಪಂಪ್​​ವೆಲ್​ನಲ್ಲಿ 'ಸ್ಮಾರ್ಟ್' ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ: 445 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ

author img

By

Published : Oct 20, 2019, 9:40 AM IST

ಮಂಗಳೂರಿನಲ್ಲಿ 7.50 ಎಕರೆ ಸ್ಥಳದಲ್ಲಿ 445 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಮಾದರಿಯಲ್ಲಿ‌ ಬಸ್ ನಿಲ್ದಾಣ ನಿರ್ಮಾಣವಾಗಲಿದೆ.

ಸ್ಮಾರ್ಟ್ ಸಿಟಿ ಸಲಹಾ ವೇದಿಕೆ ಸಭೆ

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ಬಸ್ ನಿಲ್ದಾಣ ಪಂಪ್​ವೆಲ್​ಗೆ ಸ್ಥಳಾಂತರಗೊಳ್ಳಲಿದ್ದು, 7.50 ಎಕರೆ ಸ್ಥಳದಲ್ಲಿ 445 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಮಾದರಿಯಲ್ಲಿ‌ ನಿರ್ಮಾಣವಾಗಲಿದೆ. ಈ ಹಿನ್ನೆಲೆಯಲ್ಲಿ ಎ.ಬಿ.ಶೆಟ್ಟಿ ಸರ್ಕಲ್​ನಿಂದ ಕ್ಲಾಕ್ ಟವರ್​​ವರೆಗಿನ ರಸ್ತೆಯನ್ನು ಏಕಮುಖ ಸಂಚಾರ ಮಾಡಲಾಗುದಿಲ್ಲ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ನಜೀರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಸಲಹಾ ವೇದಿಕೆ ಸಭೆಯಲ್ಲಿ ಅವರು ಜಿಲ್ಲಾಧಿಕಾರಿಗೆ ಈ ಬಗ್ಗೆ ವಿವರಣೆ ನೀಡಿ, ಹಳೆಯ ಬಸ್ ನಿಲ್ದಾಣದಲ್ಲಿ ಸುಸಜ್ಜಿತವಾಗಿ ಸಿಟಿ ಬಸ್​​ಗಳ ನಿಲ್ದಾಣ ವ್ಯವಸ್ಥೆ ಆಗಲಿದೆ ಎಂದು ಹೇಳಿದರು. ಅಲ್ಲದೆ ಸ್ಮಾರ್ಟ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಲೇಡಿಗೋಷನ್ ಆಸ್ಪತ್ರೆಗೆ 5 ಕೋಟಿ ರೂ. ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ 45 ಕೋಟಿ ರೂ. ಅನುದಾನ ಬರಲಿದೆ. ಇನ್ನು ಲೇಡಿಗೋಷನ್​ನ ನೂತನ ಅಂತಸ್ತು ನಿರ್ಮಾಣಕ್ಕೆ ಈ ಅನುದಾನ ಬಳಕೆಯಾಗುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ನಗರದ ಪುರಭವನದ ಮುಂಭಾಗ ಸ್ಮಾರ್ಟ್ ಮಾದರಿಯ ಅಂಡರ್ ಪಾಸ್​ಗೆ ಕಾಮಗಾರಿ ಆರಂಭವಾಗಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ರಸ್ತೆಯಲ್ಲಿರುವ ಮಿನಿ ವಿಧಾನಸೌಧದ ಮುಂಭಾಗದಿಂದ ಅಂಡರ್ ಪಾಸ್ ಆರಂಭಗೊಂಡು ಪುರಭವನದ ಎಡಭಾಗದ ರಸ್ತೆಯ ಅಂಚಿನಲ್ಲಿರುವ ಹಳೆಯ ತಾಜ್ ಮಹಲ್ ಹೋಟೆಲ್​ವರೆಗೆ ಇರಲಿದೆ. ಈಗಾಗಲೇ ಈ ಕಾಮಗಾರಿ ಆರಂಭಗೊಂಡಿದ್ದು, ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ‌.

Intro:ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ನಲ್ಲಿರುವ ಸರ್ವಿಸ್ ಬಸ್ ಸ್ಟ್ಯಾಂಡ್ ಪಂಪ್ ವೆಲ್ ಗೆ ಸ್ಥಳಾಂತರಗೊಳ್ಳಲಿದ್ದು, 7.50 ಎಕರೆ ಸ್ಥಳದಲ್ಲಿ 445 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಮಾದರಿಯಲ್ಲಿ‌ ನಿರ್ಮಾಣವಾಗಲಿದೆ. ಈ ಹಿನ್ನೆಲೆಯಲ್ಲಿ ಎ.ಬಿ.ಶೆಟ್ಟಿ ಸರ್ಕಲ್ ನಿಂದ ಕ್ಲಾಕ್ ಟವರ್ ವರೆಗಿನ ರಸ್ತೆಯನ್ನು ಏಕಮುಖ ಸಂಚಾರ ಮಾಡಲಾಗುದಿಲ್ಲ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ನಜೀರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಸಲಹಾ ವೇದಿಕೆ ಸಭೆಯಲ್ಲಿ ಅವರು ಜಿಲ್ಲಾಧಿಕಾರಿಗೆ ಈ ಬಗ್ಗೆ ವಿವರಣೆ ನೀಡಿ, ಹಳೆಯ ಸರ್ವಿಸ್ ಬಸ್ ಸ್ಟ್ಯಾಂಡ್ ನಲ್ಲಿ ಸುಸಜ್ಜಿತವಾಗಿ ಸಿಟಿ ಬಸ್ ಸ್ಟ್ಯಾಂಡ್ ಗಳಿಗೆ ವ್ಯವಸ್ಥೆ ಆಗಲಿದೆ ಎಂದು ಹೇಳಿದರು.

ಅಲ್ಲದೆ ಸ್ಮಾರ್ಟ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಲೇಡಿಗೋಷನ್ ಆಸ್ಪತ್ರೆಗೆ 5 ಕೋಟಿ ರೂ. ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ 45 ಕೋಟಿ ರೂ. ಅನುದಾನ ಬರಲಿದೆ‌. ವೆನ್ಲಾಕ್ ನಲ್ಲಿ 30 ಬೆಡ್ ಇರುವ ಐಸಿಯು, 100 ಪೋಸ್ಟ್ ಅಪರೇಟಿವ್ ಸಿಸ್ಟಮ್, ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಸಂಚರಿಸಲು ವೇ, ಇತ್ಯಾದಿ ಇದೆ. ಲೇಡಿಗೋಷನ್ ಗೆ ನೂತನ ಅಂತಸ್ತು ನಿರ್ಮಾಣಕ್ಕೆ ಈ ಅನುದಾನ ಬಳಕೆಯಾಗುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

Body:ಮಂಗಳೂರಿನ ಪುರಭವನದ ಮುಂಭಾಗ ಸ್ಮಾರ್ಟ್ ಮಾದರಿಯ ಅಂಡರ್ ಪಾಸ್ ಗೆ ಕಾಮಗಾರಿ ಆರಂಭವಾಗಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ರಸ್ತೆಯಲ್ಲಿರುವ ಮಿನಿ ವಿಧಾನ ಸೌಧದ ಮುಂಭಾಗದಿಂದ ಅಂಡರ್ ಪಾಸ್ ಆರಂಭಗೊಂಡು ಪುರಭವನದ ಎಡಭಾಗದ ರಸ್ತೆಯ ಅಂಚಿನಲ್ಲಿರುವ ಹಳೆಯ ತಾಜ್ ಮಹಲ್ ಹೋಟೆಲ್ ವರೆಗೆ ಈ ಅಂಡರ್ ಪಾಸ್ ಇರಲಿದೆ. ಈಗಾಗಲೇ ಈ ಕಾಮಗಾರಿ ಆರಂಭಗೊಂಡಿದ್ದು, ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ‌.

ಈ ಸಂದರ್ಭ ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಇನ್ನಿತರ ಅಧಿಕಾರಿ ಗಳು ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.