ETV Bharat / state

ಶಂಕಿತ ಎಚ್​​​1ಎನ್​1ಗೆ ವ್ಯಕ್ತಿ ಬಲಿ: ಆತಂಕದಲ್ಲಿ ಕಡಬದ ಕೋಡಿಂಬಾಳ ಜನ - ಕಡಬದ ಆಟೋ ಚಾಲಕ ಕಲ್ಪುರೆ ನಿವಾಸಿ ಕುಶಾಲಪ್ಪ ಗೌಡ

ಕಡಬದ ಆಟೋ ಚಾಲಕ ಕಲ್ಪುರೆ ನಿವಾಸಿ ಕುಶಾಲಪ್ಪ ಗೌಡ ಶಂಕಿತ ಎಚ್1 ಎನ್1 ಜ್ವರದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಕಳೆದ 20 ದಿನಗಳಿಂದ ಇವರು ಜ್ವರದಿಂದ ಬಳಲುತ್ತಿದ್ದ ಇವರು ನಿನ್ನೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Person died at kadaba suspected that H1N1
ಕುಶಾಲಪ್ಪ ಗೌಡ ಶಂಕಿತ ಎಚ್1 ಎನ್1 ಜ್ವರ ಸಾವು
author img

By

Published : Mar 4, 2020, 11:23 AM IST

ಮಂಗಳೂರು: ಕಡಬದ ಆಟೋ ಚಾಲಕ ಕಲ್ಪುರೆ ನಿವಾಸಿ ಕುಶಾಲಪ್ಪ ಗೌಡ ಶಂಕಿತ ಎಚ್1 ಎನ್1 ಜ್ವರದಿಂದಾಗಿ, ನಿನ್ನೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮಂಗಳೂರಿನಲ್ಲಿ ಖಾಸಗಿ ಬಸ್‌ ಚಾಲಕರಾಗಿದ್ದ ಇವರು ಕೆಲ ಸಮಯದಿಂದ ಕಡಬದಲ್ಲಿ ಆಟೋ ಚಾಲಕರಾಗಿಯೂ ದುಡಿಯುತ್ತಿದ್ದರು. 20 ದಿನಗಳಿಂದ ಜ್ವರ ಪೀಡಿತರಾಗಿದ್ದ ಅವರು ಮೊದಲು ಕಡಬದಲ್ಲಿ ನಂತರ ಕಾಣಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಕಡಿಮೆಯಾಗದ ಕಾರಣ ವಾರದ ಹಿಂದೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಬಳಿಕ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಶಂಕಿತ ಎಚ್‌1ಎನ್‌1 ಜ್ವರದಿಂದಾಗಿ ಮೃತಪಟ್ಟಿದ್ದಾರೆಂಬ ಸುದ್ದಿ ಗ್ರಾಮದೆಲ್ಲೆಡೆ ಹಬ್ಬಿದೆ. ಈ ಬಗ್ಗೆ ಖಾಸಗಿ ಆಸ್ಪತ್ರೆಯವರೂ ದೃಢೀಕರಿಸಿದ್ದಾರೆ ಎನ್ನಲಾಗಿದೆ.

ಆದರೆ, ಜಿಲ್ಲಾ ವೈದ್ಯಾಧಿಕಾರಿ ಡಾ. ಸಿಕಂದರ್‌ ಪಾಷಾ ಈಟಿವಿಗೆ ಮಾಹಿತಿ ನೀಡಿ ಪ್ರಾಥಮಿಕ ವರದಿ ಪ್ರಕಾರ ಕುಶಾಲಪ್ಪ ಗೌಡ ನ್ಯುಮೋನಿಯಾದಿಂದ ಮೃತಪಟ್ಟಿರುವುದಾಗಿಯೂ, ನ್ಯುಮೋನಿಯಾದಲ್ಲಿಯೂ ಎಚ್‌1ಎನ್‌1 ಜ್ವರದ ರೀತಿಯ ಗುಣಲಕ್ಷಣಗಳು ಕಂಡು ಬರುವುದರಿಂದಾಗಿ ಗೊಂದಲ ಉಂಟಾಗಿದೆ.

ಇದೀಗ ಕಡಬದ ಜನತೆಗೆ ಆತಂಕ ಎದುರಾಗಿದ್ದು, ಈ ಹಿಂದೆಯೂ ಕೋಡಿಂಬಾಳದ ಮಡ್ಯಡ್ಕ, ಮಜ್ಜಾರು, ಪ್ರದೇಶಗಳಲ್ಲಿ ಜ್ವರ ಬಂದು ಕೆಲವು ಮಂದಿ ಮೃತಪಟ್ಟಿದ್ದರು. ಇದಕ್ಕೂ ಸ್ಪಷ್ಟ ಕಾರಣ ಈ ತನಕವೂ ಗೊತ್ತಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.