ETV Bharat / state

ರೈಲು, ವಿಮಾನಗಳ ಮೂಲಕ ಊರು ಸೇರಿದವರು ಕ್ವಾರಂಟೈನ್ ನಿಯಮ ಪಾಲಿಸಬೇಕು - ಸಂಜೀವ ಮಠಂದೂರು ಲೇಟೆಸ್ಟ್ ನ್ಯೂಸ್

ರೈಲು, ವಿಮಾನಗಳ ಮೂಲಕ ಬಂದವರು ಸ್ವ ಇಚ್ಛೆಯಿಂದ ತಮ್ಮ ಮನೆಗಳಲ್ಲಿ 14 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ ನಿಯಮ ಪಾಲಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

sanjeeva matandooru
ಸಂಜೀವ ಮಠಂದೂರು
author img

By

Published : Apr 30, 2021, 8:56 AM IST

ಪುತ್ತೂರು: ರೈಲುಗಳ ಮೂಲಕ ಬೆಂಗಳೂರು ಸೇರಿದಂತೆ ಕೆಲವೆಡೆಯಿಂದ ಸಾಕಷ್ಟು ಮಂದಿ ಪುತ್ತೂರು ಮತ್ತು ಅಕ್ಕಪಕ್ಕದ ತಾಲೂಕುಗಳಿಗೆ ಬಂದಿದ್ದಾರೆ. ವಿಮಾನಗಳ ಮೂಲಕವೂ ಆಗಮಿಸಿದ್ದಾರೆ. ಅವರೆಲ್ಲ ಸ್ವ ಇಚ್ಛೆಯಿಂದ ತಮ್ಮ ಮನೆಗಳಲ್ಲಿ 14 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ ನಿಯಮ ಪಾಲಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಸೂಚಿಸಿದ್ದಾರೆ.

ಸಂಜೀವ ಮಠಂದೂರು

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಕೊರೊನಾ ಮುಂಚೂಣಿ ಯೋಧರು ಈ ನಿಟ್ಟಿನಲ್ಲಿ ಸಹಕರಿಸಬೇಕು. ಯಾರೆಲ್ಲ ರೈಲು, ವಿಮಾನಗಳ ಮೂಲಕ ಬಂದಿದ್ದಾರೋ ಅವರೆಲ್ಲರೂ ಕಡ್ಡಾಯ ಕ್ವಾರಂಟೈನ್ ನಿಯಮ ಪಾಲಿಸುವುದನ್ನು ಖಚಿತಪಡಿಸಲು ಸಹಕರಿಸಬೇಕು. ವೈಯಕ್ತಿಕವಾಗಿ ಇವರೆಲ್ಲ ಸ್ವಇಚ್ಛೆಯಿಂದ ಕ್ವಾರಂಟೈನ್‌ಗೆ ಒಳಪಡುವ ಮೂಲಕ ತಮ್ಮ ಆರೋಗ್ಯ ಮತ್ತು ಸಮಾಜದ ಆರೋಗ್ಯ ರಕ್ಷಣೆಗಾಗಿ ತಮ್ಮ ಕೊಡುಗೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ದ.ಕ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 1175 ಕೊರೊನಾ ಪಾಸಿಟಿವ್ ಪ್ರಕರಣ

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆಯಿದೆ. ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆಯೂ ಇದೆ. ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ಬಳಸುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ಒಪ್ಪಿವೆ. ಕೊರೊನಾ ಕರ್ಫ್ಯೂ ನಿಯಮಗಳನ್ನು ಜಾರಿಗೆ ತರುವಲ್ಲಿ ಪೊಲೀಸರು ಶ್ರಮಿಸುತ್ತಿದ್ದಾರೆ. ಶಾಲಾ ಶಿಕ್ಷಕರನ್ನು ಕೂಡ ಕೊರೊನಾ ಕರ್ತವ್ಯದಲ್ಲಿ ಬಳಸಲಾಗುತ್ತಿದೆ ಎಂದು ಶಾಸಕರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.