ETV Bharat / state

ಭಟ್ಕಳದಲ್ಲಿ ಕೊರೊನಾ ಪ್ರಕರಣ: ಆರೋಗ್ಯ ಸೇತು ಆ್ಯಪ್​ನಿಂದ ಜನರು ಭಯಭೀತ - ಕೊರೊನಾ ಇತ್ತೀಚಿನ ಸುದ್ದಿ

ಪಟ್ಟಣದಲ್ಲಿ ಸೋಮವಾರ ಒಂದು ಹಾಗೂ ಮಂಗಳವಾರ ಮತ್ತು ಬುಧವಾರ ಮತ್ತೆ ಮೂರು, ಒಟ್ಟು ನಾಲ್ಕು ಸೋಂಕಿತ ಪ್ರಕರಣಗಳು ಪತ್ತೆಯಾಗಿರುವುದಾಗಿ ಆರೋಗ್ಯ ಸೇತು ಆ್ಯಪ್‍ನಲ್ಲಿ ತೋರಿಸುತ್ತಿದೆ.

DOC Title *    People panicked by arogya Setu app
ಭಟ್ಕಳದಲ್ಲಿ ಕೊರೊನಾ ಪ್ರಕರಣ
author img

By

Published : May 6, 2020, 10:41 AM IST

Updated : May 6, 2020, 11:14 AM IST

ಭಟ್ಕಳ (ಉತ್ತರ ಕನ್ನಡ) : ಕೊರೊನಾ ವೈರಸ್‍ನಿಂದ ತೆಗೆದುಕೊಳ್ಳಬೇಕಾದ ಕ್ರಮಗಳು, ಎಲ್ಲೆಲ್ಲಿ ಕೊರೊನಾ ಪ್ರಕರಣಗಳು ಇವೆ ಎಂಬುದನ್ನು ಸೇರಿದಂತೆ ಹಲವು ಮಹತ್ವದ ಮಾಹಿತಿಯನ್ನು ಒದಗಿಸುವ ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಲು ಪ್ರಧಾನಿ ಮೋದಿಯೇ ಮನವಿ ಮಾಡಿದ್ದಾರೆ. ಆದರೆ, ಇದೇ ಆ್ಯಪ್ ಇದೀಗ ಪಟ್ಟಣದ ಜನರ ನಿದ್ದೆಗೆಡಿಸಿದೆ.

ಪಟ್ಟಣದಲ್ಲಿ ಸೋಮವಾರ ಒಂದು ಹಾಗೂ ಮಂಗಳವಾರ ಮತ್ತು ಬುಧವಾರ ಮತ್ತೆ ಮೂರು, ಒಟ್ಟು ನಾಲ್ಕು ಸೋಂಕಿತ ಪ್ರಕರಣಗಳು ಪತ್ತೆಯಾಗಿರುವುದಾಗಿ ಆರೋಗ್ಯ ಸೇತು ಆ್ಯಪ್‍ನಲ್ಲಿ ಮಾಹಿತಿ ಅಪ್ಲೋಡ್​​​​ ಆಗಿದ್ದು, ಇದು ಆ್ಯಪ್ ಬಳಕೆದಾರರಲ್ಲಿ ಆತಂಕವನ್ನುಂಟು ಮಾಡಿದೆ.

ಯಾಕಿದು ಹೀಗೆ?:

ಆರೋಗ್ಯ ಸೇತು ಆ್ಯಪ್ ಬ್ಲ್ಯೂಟೂತ್ ಹಾಗೂ ಜಿಪಿಎಸ್ ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಮೊದಲ ಬಾರಿಗೆ ಆ್ಯಪ್ ಡೌನ್‍ಲೋಡ್ ಮಾಡುವ ಬಳಕೆದಾರ, ಅಲ್ಲಿ ಕೇಳಲಾಗುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಈ ವೇಳೆ, ಕೆಲವು ವೈಯಕ್ತಿಕ ಮಾಹಿತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕಿದೆ. ಆ್ಯಪ್‍ನ ಮೇಲ್ಭಾಗದಲ್ಲಿ ‘ಡೇಂಜರ್’ (ಕೆಂಪು ಬಣ್ಣದಲ್ಲಿ ‘ಐ’ ಎಂದಿರುವುದು) ಚಿಹ್ನೆಯೊಂದನ್ನು ನೀಡಲಾಗಿದ್ದು, ಇದನ್ನು ಕ್ಲಿಕ್ ಮಾಡಿದಲ್ಲಿ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ ಹಾಗೂ ಕೋವಿಡ್- 19 ಸೋಂಕು ದೃಢಪಟ್ಟಿದೆ ಎಂಬ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇದನ್ನು ಕ್ಲಿಕ್ ಮಾಡಿದಲ್ಲಿ ಆ ವ್ಯಕ್ತಿಗೆ ಸೋಂಕು ಇದೆಯೆಂದು ಆ್ಯಪ್ ಅರಿತುಕೊಳ್ಳುತ್ತದೆ.

People panicked by arogya Setu app
ಆರೋಗ್ಯ ಸೇತು ಆಪ್​ನಿಂದ ಜನರು ಭಯಭೀತ

ಜತೆಗೆ, ಆ ವ್ಯಕ್ತಿ ಆ್ಯಪ್ ಇರುವ ಮೊಬೈಲ್ ಅನ್ನು ಇಟ್ಟುಕೊಂಡು ಎಲ್ಲೇ ಹೋದರೂ ಅದು ಆತನ ಸಮೀಪದಲ್ಲಿ ಆ್ಯಪ್ ಬಳಸುತ್ತಿರುವವರಿಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ. ಹೀಗೆ ಪಟ್ಟಣದಲ್ಲಿ ಆ್ಯಪ್ ಬಳಸಲು ಬಾರದ ಅಥವಾ ಉದ್ದೇಶಿತಪೂರ್ವಕವಾಗಿ, ಸುರಕ್ಷಿತವಾಗಿದ್ದರೂ ಈ ‘ಡೇಂಜರ್’ ಆಯ್ಕೆಯಲ್ಲಿ ನೀಡಲಾದ ‘ಕೋವಿಡ್- 19 ಸೋಂಕು ದೃಢಪಟ್ಟಿದೆ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ್ದಾರೆ. ಇದರಿಂದಾಗಿ ಸೋಮವಾರದಿಂದ ಪಟ್ಟಣದ ಕೇಂದ್ರ ಭಾಗದಿಂದ 2 ಕಿ.ಮೀ. ಹಾಗೂ 5 ಕಿ.ಮೀ. ದೂರದಲ್ಲಿ ತಲಾ ಒಬ್ಬ ಹಾಗೂ 10 ಕಿ.ಮೀ. ದೂರದಲ್ಲಿ ಇಬ್ಬರು ಸೋಂಕಿತರು ಇರುವುದಾಗಿ ಆ್ಯಪ್ ಸೂಚನೆ ನೀಡುತ್ತಿದೆ.

People panicked by arogya Setu app
ಆರೋಗ್ಯ ಸೇತು ಆಪ್​ನಿಂದ ಜನರು ಭಯಭೀತ

ಜತೆಗೆ, 14 ಮಂದಿ ಅನಾರೋಗ್ಯಕ್ಕೆ ತುತ್ತಾಗಿರುವುದಾಗಿಯೂ ಮಾಹಿತಿ ನೀಡುತ್ತಿದೆ. ಅಲ್ಲದೇ, ಒಬ್ಬರ ಮೊಬೈಲ್‍ನಲ್ಲಿ ಒಂದು, ಇನ್ನೊಬ್ಬರ ಮೊಬೈಲ್‍ನಲ್ಲಿ ಇನ್ನೊಂದು ತೆರನಾದ ಮಾಹಿತಿಯನ್ನೇ ಆ್ಯಪ್ ತೋರಿಸುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

Last Updated : May 6, 2020, 11:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.