ದಕ್ಷಿಣ ಕನ್ನಡ: ಲಾಕ್ಡೌನ್ ನಡುವೆಯೂ ಜನರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ತೆರೆಯಲಾಗಿದ್ದ ನ್ಯಾಯಬೆಲೆ ಅಂಗಡಿ ಮುಂದೆ ಜನಸಂದಣಿ ಉಂಟಾಗಿದ್ದು, ಕೆಲಕಾಲ ಗೊಂದಲ ಸೃಷ್ಟಿಯಾದ ಘಟನೆ ಇಲ್ಲಿನ ಕಡಬದಲ್ಲಿ ನಡೆದಿದೆ. ಕಡಬ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ವಿತರಣೆ ಮಾಡುವ ಸಂದರ್ಭ ಜನರ ನೂಕುನುಗ್ಗಲು ಏರ್ಪಟ್ಟಿತ್ತು.
ಸ್ವಲ್ಪ ಸಮಯ ಗೊಂದಲದ ವಾತಾವರಣ ಉಂಟಾಗಿತ್ತು. ನಂತರ ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಜನರಿಗೆ ಸರದಿ ಸಾಲಿನ ವ್ಯವಸ್ಥೆ ಮಾಡಿದರು. ಇಷ್ಟಾದರೂ ಜನಸಂದಣಿ ಕಡಿಮೆಯಾಗದ ಹಿನ್ನೆಲೆ ದಿನವೊಂದಕ್ಕೆ 120 ಜನರಂತೆ ರೇಷನ್ ಕೊಳ್ಳಲು ಟೋಕನ್ ವ್ಯವಸ್ಥೆ ಮಾಡಲಾಯಿತು.
ಇದಕ್ಕೂ ಮೊದಲು ಜನಸಂದಣಿ ನಿಯಂತ್ರಿಸಲು ಸ್ಥಳಕ್ಕೆ ಕಡಬ ತಹಶಿಲ್ದಾರರು, ಕಂದಾಯ ನಿರೀಕ್ಷಕರು, ಪಂಚಾಯತ್ ಅಧಿಕಾರಿಗಳು, ಸಹಕಾರಿ ಸಂಘದ ಪದಾಧಿಕಾರಿಗಳು ಆಗಮಿಸಿ ಚರ್ಚೆ ನಡೆಸಿದರು. ನಂತರ ದಿನಕ್ಕೆ 120ರಂತೆ ಟೋಕನ್ ವ್ಯವಸ್ಥೆ ಕಲ್ಪಿಸಿ ಸಮಸ್ಯೆ ಬಗೆಹರಿಸಿದರು.