ETV Bharat / state

ವೀರೇಂದ್ರ ಹೆಗ್ಗಡೆಯವರ 53 ನೇ ವರ್ಧಂತ್ಯುತ್ಸವ: ಧರ್ಮಸ್ಥಳಕ್ಕೆ ಉಡುಪಿ ಪೇಜಾವರ ಶ್ರೀ ಭೇಟಿ - ಉಡುಪಿ ಪೇಜಾವರ ಶ್ರೀ

ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂದರ್ಭ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು. ನಂತರ ಶ್ರೀಗಳು ಡಾ. ಹೆಗ್ಗಡೆಯವರೊಂದಿಗೆ ಸಮಾಲೋಚನೆ ನಡೆಸಿದರು.

Pejavara swamiji visite dharmasthala
ಧರ್ಮಸ್ಥಳಕ್ಕೆ ಉಡುಪಿ ಪೇಜಾವರ ಶ್ರೀ ಭೇಟಿ
author img

By

Published : Oct 25, 2020, 11:13 AM IST

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂದರ್ಭ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.

ಧರ್ಮಸ್ಥಳಕ್ಕೆ ಉಡುಪಿ ಪೇಜಾವರ ಶ್ರೀ ಭೇಟಿ..

ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸಾಂಪ್ರಾದಾಯಿಕವಾಗಿ ಪೇಜಾವರ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಸ್ವಾಮೀಜಿಯವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಕ್ಷೇತ್ರದ ವತಿಯಿಂದ ಹೆಗ್ಗಡೆಯವರು ಸ್ವಾಮೀಜಿಯವರನ್ನು ಗೌರವಿಸಿದರು. ಅದೇ ರೀತಿ ಪೇಜಾವರ ಶ್ರೀಗಳು ಡಾ. ಹೆಗ್ಗಡೆಯವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಅವರನ್ನೂ ಶ್ರೀಗಳು ಗೌರವಿಸಿದರು. ನಂತರ ಶ್ರೀಗಳು ಡಾ. ಹೆಗ್ಗಡೆಯವರೊಂದಿಗೆ ಸಮಾಲೋಚನೆ ನಡೆಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ವರ್ಧಂತ್ಯುತ್ಸವ ನಡೆಯುತ್ತಿದೆ. ಅವರ 53ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಂದರ್ಭ ಅಭಿನಂದನೆ ಸಲ್ಲಿಸಲು ಹಾಗೂ ಕೃಷ್ಣಾನುಗ್ರಹ ಪ್ರಾರ್ಥನೆ ಮಾಡಲು ಆಗಮಿಸಿರುವುದಾಗಿ ತಿಳಿಸಿದರು.

ನಾವು ಹೆಗ್ಗಡೆಯವರಿಗೆ ಭಗವಂತನಲ್ಲಿ ಆಯುರಾರೋಗ್ಯ ಕರುಣಿಸಲಿ ಎಂದು ಪಾರ್ಥನೆ ಮಾಡುತ್ತೇವೆ. ಸಮಾಜ ಸೇವೆ, ಇನ್ನೂ ಹೆಚ್ಚಿನ ಸತ್ ಚಿಂತನೆಗಳು ಅವರಿಂದ ಆಗುವಂತೆ ಭಗವಂತ ಅವರಿಗೆ ಶಕ್ತಿ ಸಾಮರ್ಥ್ಯ ನೀಡಲಿ ಎಂದು ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.