ETV Bharat / state

ವೆನ್​ಲಾಕ್ ಕೋವಿಡ್ ಆಸ್ಪತ್ರೆ ವ್ಯವಸ್ಥೆ ಬಗ್ಗೆ ರೋಗಿಗಳ ಅಸಮಾಧಾನ: ಆರೋಪ ತಳ್ಳಿಹಾಕಿದ ಡಿಹೆಚ್ಒ - ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಪ್ರತಿಕ್ರಿಯೆ

ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

Wenlock Covid hospital
ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆ
author img

By

Published : Jun 23, 2020, 5:33 PM IST

ಮಂಗಳೂರು: ನಗರದ ವೆನ್​ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ರೋಗಿಗಳು ವಿಡಿಯೋ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಿರಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ.

ವೆನ್​ಲಾಕ್​ ಕೋವಿಡ್ ಆಸ್ಪತ್ರೆ ವ್ಯವಸ್ಥೆಯ ಬಗ್ಗೆ ರೋಗಿಗಳ ಅಸಮಾಧಾನ: ಆರೋಪ ತಳ್ಳಿಹಾಕಿದ ಡಿಹೆಚ್ಒ
ವಿಡಿಯೋದಲ್ಲಿ ಕಳಪೆ ಗುಣಮಟ್ಟದ ಔಷಧಿ ನೀಡಲಾಗುತ್ತಿದ್ದು, ಕುಡಿಯಲು ಶುದ್ಧ ನೀರು ನೀಡುತ್ತಿಲ್ಲ. ಬಾತ್ ರೂಮ್​ಗಳಲ್ಲಿ ಅಲ್ಲಲ್ಲಿ ಬಳಸಿಟ್ಟ ಮಾಸ್ಕ್​ಗಳನ್ನು ಇಡಲಾಗುತ್ತಿದೆ. ಎಲ್ಲಾ ರೋಗಿಗಳು ಒಂದೇ ಶೌಚಾಲಯವನ್ನು ಉಪಯೋಗಿಸಬೇಕು. ಅಲ್ಲದೆ ಐಸೋಲೇಷನ್ ವಾರ್ಡ್​ನ ಬಾಗಿಲುಗಳು ತೆರೆದಿದ್ದು, ಕೊರೊನಾ ಸೋಂಕಿತರು ಯಾವಾಗ ಬೇಕಾದರೂ ಹೊರಗೆ ಹೋಗಲು ಅವಕಾಶ ಇದೆ. ರೋಗಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ.

ಆದರೆ, ಈ ಬಗ್ಗೆ ಈಟಿವಿ ಭಾರತದೊಂದಿಗೆ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಿರಿ ವೆನ್​ಲಾಕ್ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಗಳು ಸರಿಯಾಗಿದ್ದು, ಸುಳ್ಳು ಆರೋಪ ಮಾಡಲಾಗಿದೆ. ಸೋಂಕಿತರಿಗೆ ವಿಟಮಿನ್ ಸಿ ಮಾತ್ರೆಗಳನ್ನು ನೀಡಲಾಗುತ್ತಿದ್ದು, ಬೇರೆ ಯಾವ ಮಾತ್ರೆಗಳನ್ನು ನೀಡಲಾಗುತ್ತಿಲ್ಲ. ಯಾರಿಗೂ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲು ವ್ಯವಸ್ಥೆ ಇಲ್ಲ. ಆದರೆ ಸೋಂಕಿತರ ಬೆಡ್​ಗಳ ನಡುವೆ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳಲಾಗಿದೆ. ಜೊತೆಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಉತ್ತಮವಾದ ಆಹಾರ ವ್ಯವಸ್ಥೆ ಇದೆ. ಆದರೂ ಕೆಲವೊಂದು ರೋಗಿಗಳು ಸುಳ್ಳು ಆರೋಪ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.