ಸುಳ್ಯ : ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನದ ಕೀ ಕೊಟ್ಟರೆ ಭಾರಿ ಮೊತ್ತದ ದಂಡ ಬೀಳುತ್ತೆ. ಸುಳ್ಯದಲ್ಲಿ ನ್ಯಾಯಾಲಯವು ಹೀಗೊಂದು ಅಪರೂಪದ ತೀರ್ಪು ನೀಡಿದೆ. ಅಪ್ರಾಪ್ತನಿಗೆ ಬೈಕ್ ಕೊಟ್ಟ ತಪ್ಪಿಗೆ ಪೋಷಕರು ದಂಡ ಕಟ್ಟಿದ್ದಾರೆ.
ಸುಳ್ಯ ತಾಲೂಕಿನ ದೇವಚಳ್ಳದ ಅಪ್ರಾಪ್ತ ಬಾಲಕನೊಬ್ಬ ಬೈಕ್ ಚಲಾಯಿಸಿಕೊಂಡು ಹೋಗುತ್ತಿರಬೇಕಾದರೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ಪ್ರಕರಣದ ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯ ಆತನ ಪೋಷಕರಿಗೆ 10,000 ಸಾವಿರ ರೂಪಾಯಿ ದಂಡ ವಿಧಿಸಿದೆ.
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಸುರೇಶ ಎಂಬುವರು ತನ್ನ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ್ದರು. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಸುಳ್ಯ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಇಂದು ಬಾಲಕನ ಪೋಷಕರಿಗೆ 10,000 ಸಾವಿರ ರೂ. ದಂಡ ವಿಧಿಸಿದೆ.
ಇನ್ಮುಂದೆ ಅಪ್ರಾಪ್ತ ಬಾಲಕರು ಇಲ್ಲವೇ ಮಕ್ಕಳಿಗೆ ಪೋಷಕರು ವಾಹನ ಚಲಾವಣೆಗೆ ಅವಕಾಶ ನೀಡಿದರೆ, ಇದೇ ಭಾರಿ ಮೊತ್ತದ ದಂಡ ತೆರಬೇಕಾಗುತ್ತದೆ ಈ ಮೂಲಕ ಕೋರ್ಟ್ ಎಚ್ಚರಿಕೆ ರವಾನಿಸಿದೆ.
ಇದನ್ನೂ ಓದಿ:Monkeys V/s Dogs : 300ಕ್ಕೂ ಹೆಚ್ಚು ನಾಯಿಮರಿಗಳನ್ನ ಕೊಂದು ಪ್ರತೀಕಾರ ತೀರಿಸಿಕೊಂಡ ಮಂಗಗಳು