ಮಂಗಳೂರು: ಕರಾವಳಿಯಲ್ಲಿ ಭಾಗದಲ್ಲಿ ಹಸಿರು ಕ್ರಿಸ್‌ಮಸ್ ಆಚರಿಸಲು ನಗರದ ಪೇಪರ್ ಸೀಡ್ ಸಂಸ್ಥೆ ಮುಂದಾಗಿದೆ. ಕ್ರಿಸ್‌ಮಸ್ ಟ್ರೀ ಶೃಂಗಾರಕ್ಕೆ ಬೇಕಾದ ಸ್ನೋಮ್ಯಾನ್, ಸಾಂತಾಕ್ಲೂಸ್, ಗಂಟೆಗಳು, ನಕ್ಷತ್ರಗಳನ್ನು ಪೇಪರ್‌ಗಳಿಂದಲೇ ತಯಾರಿಸಿದೆ.
ಕ್ರಿಸ್ ಮಸ್ ಸಮೀಪ ಆಗುತ್ತಿದ್ದಂತೆ ಹಬ್ಬದ ಸಂಭ್ರಮಕ್ಕೆ ತಯಾರಿಗಳು ಆರಂಭವಾಗಿದ್ದು, ಕ್ರಿಸ್ ಮಸ್ ಟ್ರೀಗೆ ಗಂಟೆ, ನಕ್ಷತ್ರ, ಸಾಂತಕ್ಲಾಸ್ಗಳಿಂದ ಸಿಂಗರಿಸಲಾಗುತ್ತದೆ. ಚೀನಾ ನಿರ್ಮಿತ ಅಲಂಕಾರಿಕ ವಸ್ತುಗಳಿಗೆ ಪರ್ಯಾಯವಾಗಿ, ಮಂಗಳೂರಿನ ಪೇಪರ್ ಸೀಡ್ ಸಂಸ್ಥೆ ಪರಿಸರ ಸ್ನೇಹ ಅಲಂಕಾರಿಕ ವಸ್ತುಗಳನ್ನು ತಯಾರಿಸಿದೆ.
ಗಂಟೆ, ಸಾಂತಕ್ಲಾಸ್, ನಕ್ಷತ್ರ ಮೊದಲಾದ ಅಲಂಕೃತ ವಸ್ತುಗಳನ್ನು ಪೇಪರ್ನಿಂದ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷವೇ ಅಲಂಕೃತ ವಸ್ತುಗಳನ್ನು ತಯಾರಿಸಿತ್ತು. ಆದರೆ, ಸಿಎಎ, ಎನ್ಆರ್ಸಿ ಗದ್ದಲದಿಂದ ಮಾರುಕಟ್ಟೆಗೆ ಬಿಡಲು ಆಗಿರಲಿಲ್ಲ. ಆದರೆ ಈ ಬಾರಿ ಅತ್ಯಧಿಕ ಪ್ರಮಾಣದಲ್ಲಿ ವಸ್ತುಗಳನ್ನು ತಯಾರಿಸಿದ್ದಾರೆ.
ಪೇಪರ್ ಸೀಡ್ ಸಂಸ್ಥೆ ಪೇಪರ್ ಮೂಲಕ ಪರಿಸರಕ್ಕೆ ಹಾನಿಯಾಗದ ಬಣ್ಣಗಳನ್ನು ಹಾಕಿ ತಯಾರಿಸಿರುವ ಈ ಅಲಂಕೃತ ವಸ್ತುಗಳನ್ನು ಜೋಪಾನವಾಗಿ ತೆಗೆದಿಟ್ಟರೆ ಮುಂದಿನ ವರ್ಷಕ್ಕೂ ಬಳಸಬಹುದಾಗಿದೆ.