ETV Bharat / state

'ಪ್ರಧಾನಿಯವರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಈ ವರ್ಷದ ದೊಡ್ಡ ನಾಟಕ'

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಘೋಷಣೆಯಾದ ಹಣವೇ ಬಂದಿಲ್ಲ. ಇನ್ನು ಈ ಹಣ ಯಾವ ರಾಜ್ಯಕ್ಕೆ ಎಷ್ಟು ಬರಬಹುದು ಎಂದು ತಿಳಿಯುತ್ತಿಲ್ಲ. ಕೇಂದ್ರ ಸರ್ಕಾರ ನಮ್ಮ ರಾಜ್ಯದ ಮೇಲೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆಪಾದಿಸಿದ್ದಾರೆ.

Press conference
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸುದ್ದಿಗೋಷ್ಠಿ
author img

By

Published : May 13, 2020, 6:46 PM IST

ಬೆಳ್ತಂಗಡಿ: ಪ್ರಧಾನ ಮಂತ್ರಿಗಳ 20 ಲಕ್ಷ ಕೋಟಿ ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಣೆ ಈ ವರ್ಷದ ಬಹು ದೊಡ್ಡ ನಾಟಕ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಲೇವಡಿ ಮಾಡಿದ್ದಾರೆ.

ಬೆಳ್ತಂಗಡಿ ಪತ್ರಕರ್ತರ ಸಂಘದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ ಇತಿಹಾಸ ನೆನಪಿಸಿಕೊಂಡು ಇದೊಂದು ಈ ವರ್ಷದ ದೊಡ್ಡ ನಾಟಕ ಎಂದು ಭಾವಿಸುತ್ತೇನೆ. ಇವತ್ತು 20 ಲಕ್ಷ ಕೋಟಿ ಅಂದರೆ ಬಹುಶಃ ಭಾರತದ ಒಟ್ಟು ಪ್ರಜೆಯ ಮೇಲೆ ಎಷ್ಟು ಬರುತ್ತದೆ ಎಂದು ನನಗೆ ಲೆಕ್ಕ ಹಾಕಲು ಬರುವುದಿಲ್ಲ. ಸುಮಾರು 135 ಕೋಟಿ ಜನಸಂಖ್ಯೆಯಲ್ಲಿ 15 ರಿಂದ 20 ಕೋಟಿ 5 ವರ್ಷ ಕೆಳಗಿನವರು, 80 ವರ್ಷಕ್ಕಿಂತ ಮೇಲ್ಪಟ್ಟವರು, ಸುಮಾರು 10ರಿಂದ 20 ಕೋಟಿ ಇರಬಹುದು. ಉಳಿದ 80 ರಿಂದ 90 ಕೋಟಿಯಲ್ಲಿ 50% ಶ್ರಮಿಕ ವರ್ಗದವರು ಮತ್ತು ಬಡವರು ಇರಬಹುದು. ಒಂದು ವೇಳೆ ಈ ಪ್ಯಾಕೇಜ್ ಸಿಕ್ಕಿದರೆ ಭಾರತ ದೇಶದ ಪ್ರಜೆಗಳ ಭಾಗ್ಯ ಎಂದು ನಾನು ಭಾವಿಸುತ್ತೇನೆ.

ಈಗಾಗಲೇ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಘೋಷಣೆಯಾದ ಹಣವೇ ಬಂದಿಲ್ಲ. ಇನ್ನು ಈ ಹಣ ಯಾವ ರಾಜ್ಯಕ್ಕೆ ಎಷ್ಟು ಬರಬಹುದು ತಿಳಿಯುತ್ತಿಲ್ಲ. ಕೇಂದ್ರ ಸರ್ಕಾರ ನಮ್ಮ ರಾಜ್ಯದ ಮೇಲೆ ಮಲತಾಯಿ ಧೋರಣೆಯನ್ನು ತೋರುತ್ತಿದೆ. ಅಷ್ಟು ಭೀಕರ ನೆರೆ ಬಂದಿದ್ದರೂ ಬೇರೆ ರಾಜ್ಯಗಳಿಗೆ 4-5 ಸಾವಿರ ಕೋಟಿ ಕೊಟ್ಟಿದ್ದರೂ ನಮ್ಮ ರಾಜ್ಯಕ್ಕೆ 1,815 ಕೋಟಿ ಮಾತ್ರ ಮಂಜೂರು ಮಾಡಿದ್ದಾರೆ. ಅದೂ ಕೂಡ ಸಂಪೂರ್ಣ ಕೊಟ್ಟಿಲ್ಲ. ನಮ್ಮ ರಾಜ್ಯದ ಬಿಜೆಪಿ ಸಂಸದರು ಯಾರೂ ಕೂಡ ಮೋದಿಯವರೊಂದಿಗೆ ಮಾತನಾಡುವುದಿಲ್ಲ, ಹೆದರುತ್ತಾರೆ ಎಂದರು.

ಅದೇ ರೀತಿ ರಾಜ್ಯ ಸರ್ಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿ, ನನ್ನ ಅನುಭವದಲ್ಲಿ ಇಷ್ಟೊಂದು ಭ್ರಷ್ಟ ಸರ್ಕಾರವನ್ನು ನಾನು ನೋಡಿಲ್ಲ. ಇನ್ನು ಜನರು ಚೀನಾ ವಸ್ತುಗಳಿಗೆ ಬಹಿಷ್ಕಾರ ಹಾಕಿ ಸ್ವದೇಶಿ ವಸ್ತುಗಳನ್ನೇ ಉಪಯೋಗಿಸಬೇಕು ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.