ಮಂಗಳೂರು: ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಅನವಶ್ಯಕವಾಗಿ ರಸ್ತೆಗಿಳಿದು ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಸುಮಾರು 50ಕ್ಕೂ ಅಧಿಕ ವಾಹನಗಳನ್ನು ಇಂದು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದ.ಕ ಜಿಲ್ಲೆಯನ್ನು ಮೂರು ದಿನಗಳ ಕಾಲ ಸಂಪೂರ್ಣ ಬಂದ್ ಮಾಡಿ ಸಾರ್ವಜನಿಕರು ಮನೆ ಬಿಟ್ಟು ಹೊರ ಬರಬಾರದು ಎಂದು ಸೂಚನೆ ನೀಡಲಾಗಿತ್ತು. ಆದರೂ ಕೆಲವರು ರಸ್ತೆಗಿಳಿದಿದ್ದರು. ಈ ಹಿನ್ನೆಲೆ ಕಾರು, ಬೈಕ್, ಸ್ಕೂಟರ್ ಸೇರಿದಂತೆ ಸುಮಾರು 50ಕ್ಕೂ ಅಧಿಕ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆಯೇ ಅನಗತ್ಯವಾಗಿ ರಸ್ತೆಗಿಳಿದವರ ವಾಹನಗಳನ್ನು ವಶಪಡಿಸಿಕೊಳ್ಳುವುದಾಗಿ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಎಚ್ಚರಿಕೆ ನೀಡಿದ್ದರು.
-
More than 50 vehicles seized from violators of lockdown.. will update details shortly..
— Harsha IPS CP Mangaluru City (@compolmlr) March 30, 2020 " class="align-text-top noRightClick twitterSection" data="
STAY HOME ... or FACE LEGAL ACTION..
I appeal everyone.. comply with lockdown instructions
">More than 50 vehicles seized from violators of lockdown.. will update details shortly..
— Harsha IPS CP Mangaluru City (@compolmlr) March 30, 2020
STAY HOME ... or FACE LEGAL ACTION..
I appeal everyone.. comply with lockdown instructionsMore than 50 vehicles seized from violators of lockdown.. will update details shortly..
— Harsha IPS CP Mangaluru City (@compolmlr) March 30, 2020
STAY HOME ... or FACE LEGAL ACTION..
I appeal everyone.. comply with lockdown instructions
ಟ್ವೀಟರ್ ಮೂಲಕ ಎಚ್ಚರಿಕೆ:
ಸಾರ್ವಜನಿಕರು ಮನೆಯಲ್ಲೇ ಇರುವ ಮೂಲಕ ಕೊರೊನಾ ವೈರಸ್‌ನಿಂದ ದೂರವಿರಬೇಕು ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್ ಹೆಸರಿನಲ್ಲಿ ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜನರನ್ನು ದಾರಿ ತಪ್ಪಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೆಲವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.