ETV Bharat / state

ಒಂದೆರಡು ದಿನಗಳಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗ ಪುನರಾರಂಭ: ಕೋಟ ಶ್ರೀನಿವಾಸ ಪೂಜಾರಿ - ವೆನ್ಲಾಕ್ ಜಿಲ್ಲಾಸ್ಪತ್ರೆ

ವೆನ್ಲಾಕ್​ ಆಸ್ಪತ್ರೆಯ ಹೊರರೋಗಿ ವಿಭಾಗವನ್ನು ಮುಂದಿನ ಒಂದೆರಡು ದಿನಗಳೊಳಗೆ ತೆರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಚಿಕಿತ್ಸೆಯನ್ನು ವಿಸ್ತರಿಸಲಾಗುತ್ತದೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು.

Wenlock District Hospital
ಕೋಟ ಶ್ರೀನಿವಾಸ ಪೂಜಾರಿ
author img

By

Published : Jun 8, 2020, 9:59 PM IST

ಮಂಗಳೂರು: ಕೋವಿಡ್ ಆಸ್ಪತ್ರೆಯಾಗಿ ಬದಲಾಯಿಸಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯ ಹೊರರೋಗಿ ವಿಭಾಗದ ಸೇವೆಯನ್ನು ಮುಂದಿನ ಒಂದೆರಡು ದಿನಗಳಲ್ಲಿ ಮತ್ತೆ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ದಿನಲೂ ವೆನ್ಲಾಕ್ ಆಸ್ಪತ್ರೆಯಲ್ಲಿ 700-800 ಹೊರ ರೋಗಿಗಳು ಇರುತ್ತಾರೆ. ಆದ್ದರಿಂದ ಬೇರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕಷ್ಟವಾಗುತ್ತಿದೆ ಎಂದು ಹೇಳಿದರು.

ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಒಂದೆರಡು ದಿನಗಳಲ್ಲಿ ಹೊರರೋಗಿ ವಿಭಾಗ ಪುನರಾರಂಭ: ಕೋಟ ಶ್ರೀನಿವಾಸ ಪೂಜಾರಿ

ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವಾಗ ಕೋವಿಡ್ ಸೋಂಕು ಇಷ್ಟು ದೀರ್ಘಕಾಲ ನಮ್ಮನ್ನು ಕಾಡುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಆದ್ದರಿಂದ ರೋಗಿಗಳಿಗೆ ತೊಂದರೆಯಾಗಬಾರದೆಂದು ಹೊರರೋಗಿ ವಿಭಾಗವನ್ನು ಮುಂದಿನ ಒಂದೆರಡು ದಿನಗಳೊಳಗೆ ತೆರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಚಿಕಿತ್ಸೆಯನ್ನು ವಿಸ್ತರಿಸಲಾಗುತ್ತದೆ ಎಂದು ಹೇಳಿದರು.

ಸವಿತಾ ಸಮಾಜದ ಹಿಂದುಳಿದ ಸಮಾಜ, ಕಟ್ಟಕಡೆಯ ಬೂತ್ ಕಾರ್ಯಕರ್ತ ಅಶೋಕ್ ಗಸ್ತಿ ಹಾಗೂ ಬೂತ್ ಮಟ್ಟದ ಸಾಮಾನ್ಯ ಕಾರ್ಯಕರ್ತ ವೀರಣ್ಣ ಕಟಾಡಿಯವರ ಹೆಸರನ್ನು ರಾಜ್ಯಸಭೆಗೆ ಬಿಜೆಪಿ ಸೂಚಿಸಿದೆ. ಇದು ರಾಜ್ಯದ ಸಾಮಾನ್ಯ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ. ಇದೊಂದು ಸ್ವಾಗತಾರ್ಹ ನಿರ್ಣಯ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.