ಮಂಗಳೂರು: ರಸ್ತೆ ಅಪಘಾತವೊಂದರಲ್ಲಿ ಮೆದುಳು ನಿಷ್ಕ್ರಿಯಗೊಂಡಿರುವ ವ್ಯಕ್ತಿಯ ಅಂಗಾಂಗಗಳನ್ನು ನಗರದ ಎ.ಜೆ. ಆಸ್ಪತ್ರೆಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಶುಕ್ರವಾರ ಬೆಂಗಳೂರು ಸ್ಪರ್ಶ ಆಸ್ಪತ್ರೆಗೆ ರವಾನಿಸಲಾಯಿತು.
ಕೇರಳ ರಾಜ್ಯದ ಕಣ್ಣೂರು ನಿವಾಸಿ ಕೆ.ವಿ.ರಮೇಶ್ (55) ಎಂಬ ವ್ಯಕ್ತಿಯ ಅಂಗಾಂಗವನ್ನು ದಾನ ಮಾಡಲು ಮೃತರ ಪತ್ನಿ ಮತ್ತು ಕುಟುಂಬ ಸದಸ್ಯರು ಒಪ್ಪಿಗೆ ನೀಡಿದರು. ಬಳಿಕ ಅಂಗಾಂಗ ದಾನದ ಪ್ರಕ್ರಿಯೆ ನಡೆದಿದೆ. ಮೃತರ ಲಿವರ್ ಅನ್ನು ಬೆಂಗಳೂರಿಗೆ ರವಾನಿಸಲಾಯಿತು. ಝಿರೋ ಟ್ರಾಫಿಕ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತು.
ಓದಿ: ಬಾಕಿ ಬಿಲ್ ಪಾವತಿಗೆ ಪಟ್ಟು: ಕಸದ ಗೂಡಾದ ರಾಜ್ಯದ ರಾಜಧಾನಿ
ಅಲ್ಲಿಂದ ಸಂಜೆ 4:20ಕ್ಕೆ ಬೆಂಗಳೂರಿಗೆ ತೆರಳುವ ಇಂಡಿಗೋ ವಿಮಾನದಲ್ಲಿ ರವಾನಿಸಲಾಯಿತು. ಮೃತರ ಕಿಡ್ನಿ ಹಾಗೂ ಕಣ್ಣುಗಳನ್ನು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.