ಮಂಗಳೂರು: ಕೋವಿಡ್-19 ಸೋಂಕಿನ ಭೀತಿಯಿಂದ ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು "Online Application" ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ಈ "Online Application" ತಂತ್ರಾಂಶದ ಸೌಲಭ್ಯವನ್ನು ಹೊಂದಿರುವ ಕಾಲೇಜುಗಳಿಗೆ ಆ.17ರಿಂದ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ದಾಖಲಾತಿಗಾಗಿ ಕುಳಿತಲ್ಲೇ ಅರ್ಜಿ ಸಲ್ಲಿಸಬಹುದು.
"Online Application" ಸಲ್ಲಿಸಲು http://apply.dkpucpa.com ಗೆ ಲಾಗ್ ಇನ್ ಆಗಿ "Online Application" ಸೌಲಭ್ಯ ಹೊಂದಿರುವ ಕಾಲೇಜುಗಳ ವಿವರ ಹಾಗೂ ಸಹಾಯವಾಣಿ ಪಟ್ಟಿಯ ಲಿಂಕ್ನ್ನು ವೀಕ್ಷಿಸಬಹುದು. ಆ ಬಳಿಕ ದಾಖಲಾತಿ ಬಯಸುವ ಯಾವುದೇ ಕಾಲೇಜಿನ ಸಹಾಯವಾಣಿಗೆ ಕರೆ ಮಾಡಿ Application Number ಮತ್ತು Security Code ಅನ್ನು ಪಡೆದುಕೊಂಡು ದಾಖಲಾತಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. "Online Application" ಸಲ್ಲಿಸುವ ಬಗೆಗಿನ ಎಲ್ಲಾ ವಿವರಗಳನ್ನು ಮೇಲಿನ ವೆಬ್ಸೈಟ್ನಲ್ಲಿ ನೀಡಲಾಗಿದೆ ಎಂದು ದ.ಕ.ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.