ETV Bharat / state

ಪೇಜಾವರ ಶ್ರೀ ಅಗಲಿ ಇಂದಿಗೆ ಒಂದು ವರ್ಷ: ಮಂಗಳೂರಿನಲ್ಲಿ 'ಪೇಜಾವರ ವಿಶ್ವೇಶತೀರ್ಥ ನಮನ' - ಪೇಜಾವರ ಸ್ವಾಮೀಜಿ

ಮಂಗಳೂರಿನಲ್ಲಿ ನಡೆದ 'ಪೇಜಾವರ ವಿಶ್ವೇಶತೀರ್ಥ ನಮನ' ಕಾರ್ಯಕ್ರಮದಲ್ಲಿ ಈಗಿನ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಅಗಲಿದ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪನಮನ ಸಲ್ಲಿಸಿದರು.

pejawara
pejawara
author img

By

Published : Dec 29, 2020, 9:13 PM IST

ಮಂಗಳೂರು: ಪೇಜಾವರ ಮಠಾಧೀಶರಾಗಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಅಗಲಿ ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ 'ಪೇಜಾವರ ವಿಶ್ವೇಶತೀರ್ಥ ನಮನ' ಕಾರ್ಯಕ್ರಮ ನಡೆಯಿತು.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಗಿನ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಅಗಲಿದ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪನಮನ ಸಲ್ಲಿಸಿದರು.

ಪೇಜಾವರ ಶ್ರೀ ಅಗಲಿ ಒಂದು ವರ್ಷ

ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಹರಿಪಾದಗೈದಿರುವ ಗುರುಗಳಾದ ವಿಶ್ವೇಶತೀರ್ಥ ಸ್ವಾಮೀಜಿ ಅವರು ತಮ್ಮ ಜೀವಿತಾವಧಿಯಲ್ಲಿ ಕೃಷ್ಣನಿಗೆ ಅನುಗುಣವಾಗಿ ಬದುಕಿದವರು. ಭೌತಿಕ ಪ್ರಪಂಚದಲ್ಲಿ ಓಡಾಡಿದ್ದರೂ ಯಾವುದನ್ನು ಅಂಟಿಸಿಕೊಳ್ಳದವರು. ಹೊಗಳಿದರೆ ಅಟ್ಟಕ್ಕೇರದೆ, ತೆಗಳಿದರೆ ಧೃತಿಗೆಡದೆ ಎಲ್ಲವನ್ನೂ ಶ್ರೀಕೃಷ್ಣನಿಗೆ ಸಮರ್ಪಿಸಿದವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರು ಇಡೀ ಜಗತ್ತಿಗೆ ಮಾರ್ಗದರ್ಶಕರಾಗಿದ್ದವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳ ಕುರಿತು ರಾಮಕುಂಜ ನಾರಾಯಣ ಭಟ್ ಬರೆದ ವಿಶ್ವಸಂದೇಶ ಉತ್ತರಕಾಂಡ, ವಿಶ್ವಸಂದೇಶ ಪೂರ್ವಕಾಂಡ ಮತ್ತು ವಿಶ್ವಕಥಾ ಕುಂಜ ಕೃತಿಯನ್ನು ಪೇಜಾವರ ಶ್ರೀಗಳು ಬಿಡುಗಡೆಗೊಳಿಸಿದರು. ಇದೇ ವೇಳೆ ಹಿರಿಯ ಸಾಧಕರಿಗೆ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹಿರಿಯ ಯಕ್ಷಗಾನ ಕಲಾವಿದ ಜಬ್ಬಾರ್ ಸುಮೋ ಮೊದಲಾದವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.