ಸುಬ್ರಹ್ಮಣ್ಯ: ಓಮ್ನಿ ಕಾರು ಪಲ್ಟಿಯಾಗಿ ಒಂದು ವರ್ಷದ ಪುಟ್ಟ ಕಂದಮ್ಮ ಮೃತಪಟ್ಟಿರುವ ಘಟನೆ ಸುಬ್ರಹ್ಮಣ್ಯ ಸಮೀಪದ ಗುತ್ತಿಗಾರು ಬಳಿ ನಡೆದಿದೆ. ಸರಿತ್ ಮೃತ ಮಗು ಎಂದು ತಿಳಿದು ಬಂದಿದ್ದು, ಸುಳ್ಯದ ಕೆದಂಬಾಡಿಯ ಯತೀಶ್ ಎಂಬುವವರು ತಮ್ಮ ಮಗುವಿನ ಜೊತೆ ಕುಕ್ಕೆ ಸುಬ್ರಹ್ಮಣ್ಯದಿಂದ ಹಿಂತಿರುಗುವಾಗ ಓಮ್ನಿ ಕಾರು ಪಲ್ಟಿಯಾಗಿದೆ.
ಈ ವೇಳೆ ಕಬ್ಬಿಣದ ಸರಳು ಬಡಿದು ಮಗು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಮಗುವಿನ ಮೃತದೇಹವನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಕ್ಕೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೋವಿಡ್ 3ನೇ ಅಲೆ.. ಮೊದಲ ಬಾರಿಗೆ ಒಂದು ಸಾವಿರಕ್ಕೆ ಇಳಿದ ಸೋಂಕಿತರ ಸಂಖ್ಯೆ