ಮಂಗಳೂರು: ಹೊಸ ಮರಳು ನೀತಿಯಂತೆ ರಾಜ್ಯದಲ್ಲಿ 'ಒನ್ ಸ್ಟೇಟ್ ಒನ್ ಜಿಪಿಎಸ್' ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಈ ಮೂಲಕ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಆಚಾರ್ ಹಾಲಪ್ಪ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಮಾತನಾಡಿದ ಅವರು, ಸಿಆರ್ಝಡ್ ಹಾಗೂ ನಾನ್ ಸಿಆರ್ಝಡ್ ನಲ್ಲಿ ಮರಳು ತೆಗೆದು ನೂತನ ತಂತ್ರಜ್ಞಾನದ ಮೂಲಕ ಆ್ಯಪ್ ಮೂಲಕ ಮರಳು ಸರಬರಾಜು ಮಾಡಲಾಗುತ್ತದೆ. ಗ್ರಾಹಕರು ಆ್ಯಪ್ಗೆ ಬಂದು ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು 'ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್'ನವರು ತಯಾರಿ ಮಾಡುತ್ತಾರೆ.
ಹೊಸ ಮರಳು ನೀತಿ- 2020 ರ ಪ್ರಕಾರ ಗ್ರಾ.ಪಂ ವ್ಯಾಪ್ತಿಯ 1,2 ಮತ್ತು 3ನೇ ಶ್ರೇಣಿಯ ಹಳ್ಳಗಳ ಪಾತ್ರದಲ್ಲಿ ಗುರುತಿಸಿ ಅಧಿಸೂಚನೆ ಹೊರಡಿಸುವ 5 ಮರಳು ಬ್ಲಾಕ್ಗಳನ್ನು ಗುರುತಿಸಲಾಗಿದೆ. ಅಲ್ಲಿನ ಪಂಚಾಯತ್ಗಳಿಗೆ 300ರೂ. ಒಂದು ಟನ್ ನಂತೆ ನೀಡಲಾಗುತ್ತದೆ. ದೊಡ್ಡ ಬ್ಲಾಕ್ಗಳನ್ನು ಸಿಟಿ ಕಾರ್ಪೊರೇಷನ್ ನವರಿಗೆ ನೀಡಿ 700 ರೂ. ಗೆ ಒಂದು ಟನ್ ನಂತೆ ನೀಡಲಾಗುತ್ತದೆ. ಅದೇ ರೀತಿ ಕಾಳಸಂತೆಗೆ ಅವಕಾಶ ಕೊಡದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮರಳು ಮಿತ್ರ ಆ್ಯಪ್: ಹೊಸ ಮರಳು ನೀತಿಯನುಸಾರ ಮರಳು ಮಿತ್ರ ಆ್ಯಪ್ ಅನ್ನು ಅಳವಡಿಸಲಾಗಿದೆ. ಈ ಆ್ಯಪ್ ಅನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಬಹುದು. ಅದರಲ್ಲಿ ಎಷ್ಟು ಮರಳು ಸ್ಟಾಕ್ ಇದೆ ಎಂದು ತಿಳಿದು ಬರುತ್ತದೆ. ಅದರಲ್ಲೇ ಬೇಡಿಕೆ ಇಡಲು ಅವಕಾಶವಿದೆ. ನಗದು ಪಾವತಿ ಮಾಡಿದ ತಕ್ಷಣ ಗ್ರಾಹಕರ ಹೇಳಿದ ಸ್ಥಳಕ್ಕೆ ಮರಳು ಸರಬರಾಜು ಮಾಡಲಾಗುತ್ತದೆ.
ಟ್ರಾನ್ಸ್ ಪೋರ್ಟ್ ಚಾರ್ಜ್ ಮಾತ್ರ ಮಾಡಬೇಕು. ವಾಹನಗಳಿಗೆ ಜಿಪಿಎಸ್ ಇರುತ್ತದೆ. ಪರ್ಮಿಟ್ ಲಿಂಕ್ ಆಗಿರುತ್ತದೆ. ಜಿಯೋ ಟ್ಯಾಗಿಂಗ್ ಇರುತ್ತದೆ. ಜಿಯೋ ಪೆನ್ಷಿಂಗ್ ಇರುತ್ತದೆ. ಈ ಮೂಲಕ ಅಕ್ರಮ ಬಹಳ ಕಡಿಮೆ ಇರುತ್ತದೆ ಎಂದು ಸಚಿವ ಆಚಾರ್ ಹಾಲಪ್ಪ ಮಾಹಿತಿ ನೀಡಿದರು.
ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಅಡಕೆ ಮರ ಏರುವ ಬಾಲಕ: ಸಾಹಸಿ ಕೆಲಸಕ್ಕೆ ಪಾಲಕರು ಸಾಥ್