ಕಡಬ: ವ್ಯಕ್ತಿಯೋರ್ವರಿಗೆ ಮಹಾಮಾರಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಕಡಬದ ಶಿಕ್ಷಕರೋರ್ವರಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಅವರು ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ. ನಂತರದಲ್ಲಿ ಅವರ ವರದಿ ನೆಗೆಟಿವ್ ಎಂದು ಬಂದಿತ್ತು. ಮಾತ್ರವಲ್ಲದೇ ಅವರ ಸಂಪರ್ಕಕ್ಕೆ ಬಂದಿದ್ದ 12 ಮಂದಿಯ ವರದಿಗಳು ಸಹ ನೆಗೆಟಿವ್ ಬಂದು ಕಡಬದ ಜನತೆ ನಿರಾಳವಾಗಿದ್ದರು.
ಇದೀಗ ಮತ್ತೊಂದು ಅಘಾತ ಎದುರಾಗಿದೆ. ಈಗಾಗಲೇ ಕ್ವಾರಂಟೈನ್‌ನಲ್ಲಿದ್ದ ಕಡಬ ಬ್ಯಾಂಕ್ ವೊಂದರ ಸಿಬ್ಬಂದಿಯಾಗಿರುವ ನೂಜಿಬಾಳ್ತಿದ ನಿವಾಸಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದಾಗಿ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಗೆ ಕೊರೊನಾ ಸೋಂಕಿತ ಶಿಕ್ಷಕರು ಭೇಟಿ ನೀಡಿದ್ದರು ಎಂಬ ಕಾರಣದಿಂದಾಗಿ ಅಲ್ಲಿನ ಸಿಬ್ಬಂದಿ ಹಾಗೂ ನಿರ್ದೇಶಕರನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿತ್ತು. ಇದೀಗ ಅವರಲ್ಲಿ ಒಂದು ವರದಿ ಪಾಸಿಟಿವ್ ಬಂದಿದೆ. ಎರಡನೇ ಕೊರೊನಾ ಪ್ರಕರಣ ವರದಿ ಆಗಿರುವ ಹಿನ್ನೆಲೆಯಲ್ಲಿ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಗಳ ಸಿಬ್ಬಂದಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ.