ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬ್ಲಾಕ್ ಪಂಗಸ್ಗೆ ಓರ್ವ ಬಲಿಯಾಗಿದ್ದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಮತ್ತು ಹೊರಜಿಲ್ಲೆಯ ನಾಲ್ಕುಮಂದಿ ಬ್ಲಾಕ್ ಪಂಗಸ್ನಿಂದ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಹತ್ತು ಪ್ರಕರಣಗಳು ಬೆಳಕಿಗೆ ಬಂದಿದ್ದು ಇದರಲ್ಲಿ ಮೂವರು ದಕ್ಷಿಣ ಕನ್ನಡ ಜಿಲ್ಲೆ, ಮೂವರು ಚಿಕ್ಕಮಗಳೂರು ಜಿಲ್ಲೆ, ಇಬ್ಬರು ಉತ್ತರಕನ್ನಡ ಜಿಲ್ಲೆ ಮತ್ತು ತಲಾ ಒಬ್ಬರು ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 44 ಪ್ರಕರಣಗಳು ಪತ್ತೆಯಾಗಿದೆ.
ಇದನ್ನು ಓದಿ:ಲಂಚ ಸ್ವಿಕಾರ ಸಾಬೀತು: ಅರಣ್ಯ ಅಧಿಕಾರಿ ರಕ್ಷಿತ್ ಅಮಾನತು