ಮಂಗಳೂರು: ನಗರದ ಬಲ್ಮಠ ಮಿಶನ್ ಕಂಪೌಂಡ್ ರಸ್ತೆಯ ಬಲ್ಮಠ ಗ್ರೌಂಡ್ ಬಳಿ ಸ್ಕೂಲ್ ಬ್ಯಾಗ್‌ನಲ್ಲಿ ಗಾಂಜಾ ತುಂಬಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಇ ಆ್ಯಂಡ್ ಎನ್ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು. ಬಂಧಿತನ ಬ್ಯಾಗ್ ಪರಿಶೀಲಿಸಿದಾಗ 2 ಕೆಜಿ 32 ಗ್ರಾಂ ಗಾಂಜಾ ದೊರೆತಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನ ಎಕಾನಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.