ETV Bharat / state

ಮಂಗಳೂರು : ಮುಳುಗಿದ ಸಿರಿಯಾ ದೇಶದ ಹಡಗಿನಲ್ಲಿ ತೈಲ ಸೋರಿಕೆ ಆರಂಭ, ಮೀನುಗಾರಿಕೆ ನಿಷೇಧ

ಸಿರಿಯಾ ದೇಶದ ಪ್ರಿನ್ಸೆಸ್ ಮಿರಾಲ್ ಹಡಗು ಮಂಗಳೂರಿನ ಉಳ್ಳಾಲದ ಬಟ್ಟಪ್ಪಾಡಿ ಹತ್ತಿರದ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಈ ಹಡಗಿನಿಂದ ತೈಲ ಸೋರಿಕೆ ಆಗುತ್ತಿದ್ದು, ಮೀನುಗಾರಿಕೆ ಮಾಡದಂತೆ ಸೂಚಿಸಲಾಗಿದೆ..

Ship sinking of Syria
ಮೀನುಗಾರಿಕೆ ನಿಷೇಧ
author img

By

Published : Jun 28, 2022, 10:28 PM IST

ಮಂಗಳೂರು : ಇಲ್ಲಿನ ಉಳ್ಳಾಲದ ಬಟ್ಟಪ್ಪಾಡಿ ಹತ್ತಿರದ ಸಮುದ್ರದಲ್ಲಿ ಮುಳುಗಿದ ಸಿರಿಯಾ ದೇಶದ ಪ್ರಿನ್ಸೆಸ್ ಮಿರಾಲ್ ಹಡಗಿನಿಂದ ತೈಲ ಸೋರಿಕೆ ಆರಂಭವಾಗಿದೆ. 8000 ಟನ್ ಉಕ್ಕಿನ ಕಾಯಿಲ್​ಗಳನ್ನು ತುಂಬಿಸಿಕೊಂಡು ಚೀನಾದ ಟಿಯಾಂಜಿನ್​ನಿಂದ ಎಂ ವಿ ಪ್ರಿನ್ಸಸ್ ಮಿರಾಲ್ ಹಡಗು ಲೆಬನಾನ್​ಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಮಂಗಳೂರಿನ ಬಟ್ಟಪ್ಪಾಡಿ ಸಮೀಪದ ಸಮುದ್ರದಲ್ಲಿ ಮುಳುಗಡೆಗೊಂಡಿತ್ತು.

ಪ್ರಿನ್ಸೆಸ್ ಮಿರಾಲ್ ಸರಕು ಸಾಗಾಟದ ಹಡಗಿನಲ್ಲಿ 150 ಮೆಟ್ರಿಕ್ ಟನ್ ತೈಲ ಇದ್ದು, ತೈಲ ಸೋರಿಕೆಯಾಗುವುದನ್ನು ತಡೆಯಲು ಪ್ರಯತ್ನ ಮಾಡಲಾಗಿತ್ತು. ಹಡಗಿನಿಂದ ತೈಲ ಸೋರಿಕೆಯಾಗದಂತೆ ತಡೆಯಲು ಗುಜರಾತ್​ನ ಪೋರ ಬಂದರಿನಿಂದ 'ಸಮುದ್ರ ಪಾವಕ್' ಎಂಬ ವಿಶೇಷ ತಂತ್ರಜ್ಞ ಹಡಗು ಕೂಡ ಆಗಮಿಸಿತ್ತು. ಕೋಸ್ಟ್ ಗಾರ್ಡ್ ನೌಕೆ, 9 ಹಡಗುಗಳು, 3 ಕೋಸ್ಟ್ ಗಾರ್ಡ್ ಕಾಪ್ಟರ್​ಗಳು ನಿಗಾ ಇರಿಸಿದ್ದವು.

ಇದೀಗ ಹಡಗಿನ ಡರ್ಟಿ ವಾಟರ್ ಟ್ಯಾಂಕಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ವಲಯದ ಸುತ್ತಮುತ್ತಲಿನ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಸಿರಿಯಾ ಹಡಗು ಮುಳುಗಡೆ ಪ್ರಕರಣ.. ತೈಲ ಸೋರಿಕೆ ತಡೆಗೆ ಗುಜರಾತ್​​ನಿಂದ ಬಂದಿದೆ 'ಸಮುದ್ರ ಪಾವಕ್'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.