ETV Bharat / state

ಶತಮಾನದ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಅಡಿಕೆ ಕೃಷಿ.. ಶಿಕ್ಷಣದ ಜೊತೆ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆ ಪಾಠ - ನರಿಮೊಗರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡಿಕೆ ಕೃಷಿ

104 ವರ್ಷದ ಹಳೆಯ ಶಾಲೆಯಲ್ಲಿ ವಿದ್ಯಾರ್ಥಿಗಳು ಪಠ್ಯಶಿಕ್ಷಣದ, ಕೃಷಿ ಚಟುವಡಿಕೆಯಲ್ಲೂ ಭಾಗಿಯಾಗಿ ಶಾಲೆ ಆವರಣದಲ್ಲಿ ಅಡಿಕೆ ಬೆಳೆಯ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

nut cultivation by students
ಶಾಲಾ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆ ಪಾಠ
author img

By

Published : Apr 1, 2023, 7:52 AM IST

Updated : Apr 1, 2023, 9:40 AM IST

ವಿದ್ಯಾರ್ಥಿಗಳ ಅಡಿಕೆ ಕೃಷಿ ಚಟುವಟಿಕೆ

ಪುತ್ತೂರು (ದಕ್ಷಿಣ ಕನ್ನಡ): ಶಾಲೆಗಳಲ್ಲಿ ತರಕಾರಿ ತೋಟ ಸಹಿತ ಇನ್ನಿತರ ಕೈತೋಟಗಳನ್ನು ನಿರ್ಮಾಣ ಮಾಡುವುದು ಸರ್ವೇ ಸಾಮಾನ್ಯ. ಆದರೆ ಈ ಶಾಲೆಯಲ್ಲಿ ವಾಣಿಜ್ಯ ಬೆಳೆಯಾದ ಅಡಿಕೆ ತೋಟವನ್ನೇ ನಿರ್ಮಿಸಿ ಮಕ್ಕಳು ವಾಣಿಜ್ಯ ಬೆಳೆಯಲ್ಲಿ ಆಸಕ್ತಿ ಮೂಡಿಸಿಕೊಂಡಿದ್ದಾರೆ.

ಸುಮಾರು 104 ವರ್ಷಗಳ ಇತಿಹಾಸ ಇರುವ ನರಿಮೊಗರು ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಸದಸ್ಯ ಪ್ರವೀಣ್ ಆಚಾರ್ಯ ಅವರ ಪ್ರೋತ್ಸಾಹದೊಂದಿಗೆ ಶಾಲೆಯ ಸುತ್ತಲೂ ಶಾಲಾ ವಿದ್ಯಾರ್ಥಿಗಳು 150 ಕ್ಕೂ ಅಧಿಕ ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದಲ್ಲದೆ ಪೋಷಿಸುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ವಿಶೇಷವೆಂದರೆ ತಲಾ ಮೂರು ಅಡಿಕೆ ಗಿಡಗಳನ್ನು ಪೋಷಿಸುವ ಜವಾಬ್ದಾರಿಯನ್ನು ಓರ್ವ ವಿದ್ಯಾರ್ಥಿಗೆ ವಹಿಸಿಕೊಡಲಾಗಿದೆ. ಪ್ರತಿದಿನ ಬೆಳಗ್ಗೆ ಹಾಗೂ ರಜಾ ದಿನಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಂದು ಅಡಿಕೆ ಸಸಿಗಳಿಗೆ ನೀರು ಹಾಕುವುದು, ಗೊಬ್ಬರ ಹಾಕುವುದು ಸೇರಿದಂತೆ ಇನ್ನಿತರ ಕೆಲಸಗಳನ್ನು ಚಾಚೂ ತಪ್ಪದೇ ಮಾಡುತ್ತಿದ್ದಾರೆ.

ಶಿಕ್ಷಕರ ಕೊರತೆ ನೀಗಿಸಲು ಬೇಡಿಕೆ: ಮೂರು ಎಕರೆ ಜಾಗ ಹೊಂದಿರುವ ಈ ಶಾಲೆಯಲ್ಲಿ ಎಲ್‍ಕೆಜಿಯಿಂದ 8ನೇ ತರಗತಿಯ ಸುಮಾರು 160 ವಿದ್ಯಾರ್ಥಿಗಳಿದ್ದಾರೆ. ಏಳು ಜನ ಶಿಕ್ಷಕರಿದ್ದಾರೆ. ಶಿಕ್ಷಕರ ಸಹಕಾರವೂ ಮಕ್ಕಳಿಗೆ ಇದ್ದು, ಇಲ್ಲಿಯ ವಿದ್ಯಾರ್ಥಿಗಳು ಈಗಾಗಲೇ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶತಮಾನ ಕಂಡ ಶಾಲೆಯಲ್ಲಿ ಎಲ್ಲವೂ ಇದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಈ ಶಾಲೆಯ ಬೇಡಿಕೆ ಏನೆಂದರೆ ಶಿಕ್ಷಕರ ಕೊರತೆ, ಶಾಲೆಗೆ ಪೂರಕವಾದ ಶಿಕ್ಷಕರು ಬೇಕು. ಇನ್ನೊಂದು ಹೈಸ್ಕೂಲ್ ಆರಂಭಿಸಲು ಸರ್ಕಾರದಿಂದ ಪರವಾನಿಗೆ ಬೇಕು ಎನ್ನುವುದು.

ಇದಕ್ಕೆ ಪೂರಕವಾಗಿ ಈ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ಲಭ್ಯತೆಯೂ ಇದೆ. ಒಂಭತ್ತನೇ ತರಗತಿಗಾಗಿ ಪರವಾನಿಗಾಗಿ ಮೂರು ವರ್ಷಗಳಿಂದ ಮನವಿಯನ್ನು ನೀಡುತ್ತಾ ಬಂದಿದ್ದೇವೆ. ಶಾಸಕರಿಗೂ ಈಗಾಗಲೇ ಮನವಿ ನೀಡಲಾಗಿದೆ. ನಮ್ಮ ಬೇಡಿಕೆ ಈಡೇರಿಸುವಂತೆ ಮತ್ತೊಮ್ಮೆ ಮನವಿ ನೀಡಲಾಗುವುದು. ಸರ್ಕಾರದ ಅನುದಾನವಿಲ್ಲದೆ ಊರವರ ದಾನಿಗಳ ಸಹಕಾರದಿಂದ ಈ ಶಾಲೆ ಬೆಳೆದು ಬಂದಿದೆ. ಒಟ್ಟಿನಲ್ಲಿ ಈ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ಆಶಯ ಎಂದು ಹೇಳುತ್ತಾರೆ ಎಸ್‍ಡಿಎಂಸಿ ಸದಸ್ಯ ಪ್ರವೀಣ್ ಆಚಾರ್ಯ.

ಈ ಬಗ್ಗೆ ದೈಹಿಕ ಶಿಕ್ಷಕಿ ಶ್ರೀಲತಾ ಮಾತನಾಡಿ, 14 ವರ್ಷದಿಂದ ಇಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸರ್ಕಾರಿ ಶಾಲೆ ಅದರೆ ಒಂದಷ್ಟು ಸಂಪನ್ಮೂಲ ಕೊರತೆ ಇದ್ದೇ ಇದೆ. ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ಕೆ ದಾನಿಗಳನ್ನು, ಪೋಷಕರನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ಇದೆ. ಇಲಾಖೆ ಅನುದಾನ ಬಿಟ್ಟರೆ ಬೇರೆ ಯಾವುದೇ ಅನುದಾನ ಇಲ್ಲ. ಈ ನಿಟ್ಟಿನಲ್ಲಿ ಆಶಾ ಭಾವನೆ ಇಟ್ಟುಕೊಂಡು ಇತ್ತ ಶಾಲೆಗೆ ಆದಾಯ ತರುವ ನಿಟ್ಟಿನಲ್ಲಿ ಪೋಷಕರು, ದಾನಿಗಳನ್ನು, ಸಂಪರ್ಕಿಸಿ ಅವರ ಸಹಕಾರದಿಂದ ಮಕ್ಕಳಿಂದ 150 ಕ್ಕೂ ಅಧಿಕ ಅಡಕೆ ಗಿಡಗಳನ್ನು ಬೆಳೆಸಿದ್ದೇವೆ. ನಿರ್ವಹಣೆಯನ್ನು 6, 7 ಹಾಗೂ 8ನೇ ತರಗತಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಮಾಡುತ್ತಿದ್ದಾರೆ ಎಂದು ಹೇಳಿದರು.

ಶಾಲೆ ಬಗ್ಗೆ ಶಿಕ್ಷಕರು, ಎಸ್​ಡಿಎಂಸಿ ಸದಸ್ಯರು, ಯುಕೆಜಿ, ಎಲ್​ ಕೆಜಿಗೆ ಶೌಚಾಲಯದ ವ್ಯವಸ್ಥೆ ಬೇಡಿಕೆಯಿಟ್ಟಾಗ ಶೌಚಾಲಯದ ವ್ಯವಸ್ಥೆ ಮಾಡಿದ್ದೇನೆ. ಸಂಜೆ ಹೊತ್ತು ಶಾಲಾ ಆವರಣದಲ್ಲಿ ಪುಂಡ ಪೋಕರಿಗಳು ಗಲೀಜು ಮಾಡುತ್ತಿದ್ದರು. ಅದಕ್ಕೋಸ್ಕರ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಿದ್ದೇನೆ. ಶಾಲೆಗೆ ನಾನಲ್ಲದೆ ಊರವರ ಸಹಕಾರವೂ ಇದೆ. ಇದೀಗ ಮಕ್ಕಳು ಅಡಿಕೆ ಗಿಡ ನೆಟ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿತ್ತಾರೆ ದಾನಿ ನಳಿನ್​ ಲೋಕಪ್ಪ.

ಶೈಕ್ಷಣಿಕ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇನೆ. ತಮ್ಮ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಲತಾ, ಎಸ್ ಡಿಎಂಸಿ ಸದಸ್ಯ ಪ್ರವೀಣ್ ಆಚಾರ್ಯ ಎಲ್ಲಾ ಕೆಲಸಗಳಲ್ಲಿ ಸಹಕರಿಸುತ್ತಿದ್ದಾರೆ. ಹಾಗೇ ದಾನಿಗಳಾದ ನಳಿನಿ ಲೋಕಪ್ಪ ಗೌಡರ ಪಾತ್ರ ಶಾಲಾ ಅಭಿವೃದ್ಧಿಯಲ್ಲಿ ಮಹತ್ತರವಾಗಿದೆ ಎಂದು ಹೇಳುತ್ತಾರೆ ಶಾಲಾ ವಿದ್ಯಾರ್ಥಿನಿ ಚಿಂತನ.

ಇದನ್ನೂ ಓದಿ: SSLC ಪರೀಕ್ಷೆಗೆ ಅಸಲಿ ವಿದ್ಯಾರ್ಥಿ ಚಕ್ಕರ್, ನಕಲಿ ವಿದ್ಯಾರ್ಥಿ ಹಾಜರ್: ಇಬ್ಬರ ವಿರುದ್ಧವೂ ಕೇಸ್​ ದಾಖಲು

Last Updated : Apr 1, 2023, 9:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.