ETV Bharat / state

ಸುಳ್ಯದ ನ್ಯಾಯಾಲಯಕ್ಕೆ ಹಾಜರಾಗುವಂತೆ ಡಿಕೆಶಿಗೆ ನೋಟಿಸ್

author img

By

Published : Sep 30, 2021, 7:18 PM IST

ಪ್ರಕರಣವೊಂದರ ಸಂಬಂಧ ಸೆಪ್ಟೆಂಬರ್ 29ರಂದು ಡಿ.ಕೆ.ಶಿವಕುಮಾರ್ ಅವರು ಸುಳ್ಯ ನ್ಯಾಯಾಲಯಕ್ಕೆ ತನಿಖೆಗೆ ಹಾಜರಾಗಬೇಕಿತ್ತು. ಈ ಬಗ್ಗೆ ನೋಟಿಸ್ ನೀಡಲಾಗಿತ್ತು. ಆದರೆ ಡಿಕೆಶಿ ಅವರು ಹಾಜರಾಗದ ಹಿನ್ನೆಲೆಯಲ್ಲಿ ನವೆಂಬರ್ ಮೊದಲ ವಾರದಲ್ಲಿ ನ್ಯಾಯಾಲಯಕ್ಕೆ ಮತ್ತೆ ಹಾಜರಾಗುವಂತೆ ವಾರೆಂಟ್ ಹೊರಡಿಸಲಾಗಿದೆ.

Notice to DKS to appear at the Court of Sulaya
ಸುಳ್ಯದ ನ್ಯಾಯಾಲಯಕ್ಕೆ ಹಾಜರಾಗುವಂತೆ ಡಿಕೆಶಿಗೆ ನೋಟಿಸ್

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನ್ಯಾಯಾಲಯದಿಂದ ಮಾಜಿ ಇಂಧನ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ವಾರಂಟ್ ಜಾರಿಯಾಗಿದೆ.

ಸೆಪ್ಟೆಂಬರ್ 29ರಂದು ಡಿ.ಕೆ ಶಿವಕುಮಾರ್ ಅವರು ಸುಳ್ಯ ನ್ಯಾಯಾಲಯಕ್ಕೆ ತನಿಖೆಗೆ ಹಾಜರಾಗಬೇಕಿತ್ತು.ಈ ಬಗ್ಗೆ ನೋಟಿಸ್ ನೀಡಲಾಗಿತ್ತು.ಆದರೆ ಡಿಕೆಶಿ ಅವರು ಹಾಜರಾಗದ ಕಾರಣ ನವೆಂಬರ್ ಮೊದಲ ವಾರದಲ್ಲಿ ನ್ಯಾಯಾಲಯಕ್ಕೆ ಮತ್ತೆ ಹಾಜರಾಗುವಂತೆ ವಾರೆಂಟ್ ಹೊರಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಏನಿದು ಪ್ರಕರಣ.?

ಸುಳ್ಯ ತಾಲೂಕಿನಲ್ಲಿ ನಿರಂತರವಾಗಿ ಕಾಡುತ್ತಿದ್ದ ವಿದ್ಯುತ್ ಸಮಸ್ಯೆಯ ಬಗ್ಗೆ ಬೆಳ್ಳಾರೆಯ ವರ್ತಕ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ್ ರೈ ಎಂಬುವರು 2016ರ ಫೆಬ್ರವರಿ 28ರಂದು ರಾತ್ರಿ ಅಂದಿನ ಇಂಧನ ಸಚಿವರಾಗಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಿದ್ದರು. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು ಎಂದು ಆರೋಪಿಸಲಾಗಿದೆ. ಇದು ಡಿ.ಕೆ.ಶಿವಕುಮಾರ್ ಅವರ ಕೋಪಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆ ಡಿ.ಕೆ ಶಿವಕುಮಾರ್ ಅವರು ಮೆಸ್ಕಾಂ ಎಂಡಿ ಹಾಗೂ ಸುಳ್ಯದ ಪ್ರಭಾರ ಎಇಇ ಆಗಿದ್ದ ಹರೀಶ್ ನಾಯಕ್ ಅವರ ಮೂಲಕ ಸಾಯಿ ಗಿರಿಧರ್ ರೈ ವಿರುದ್ಧ ಸುಳ್ಯ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಈ ಪ್ರಕರಣದ ಹಿನ್ನೆಲೆಯಲ್ಲಿ ಬೆಳ್ಳಾರೆ ಪೊಲೀಸರು ಗಿರಿಧರ್ ರೈ ಅವರನ್ನು ಬಂಧಿಸುವ ಸಲುವಾಗಿ ಅವರ ಮನೆಗೆ ಹೋದಾಗ ಮನೆಯಲ್ಲಿ ಮಹಿಳೆಯರು ಇದ್ದ ಕಾರಣದಿಂದಾಗಿ ಗಿರಿಧರ್ ಅವರು ಬಾಗಿಲು ತೆರೆಯಲಿಲ್ಲ ಎನ್ನಲಾಗಿದೆ. ಈ ಕಾರಣದಿಂದಾಗಿ ಮನೆಯ ಛಾವಣಿ ಹತ್ತಿ ಮನೆಯೊಳಗೆ ಇಳಿದ ಪೊಲೀಸರು ಸಾಯಿ ಗಿರಿಧರ್ ರೈ ಅವರನ್ನು ರಾತೋರಾತ್ರಿಯೇ ಬಂಧಿಸಿದ್ದರು. ಇದು ಆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.