ಮಂಗಳೂರು: ಪ್ರಪಂಚದಲ್ಲೆಡೆ ಭಯ ಹುಟ್ಟಿಸುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧಕ್ಕೆ ಮುಂಜಾಗ್ರತೆ ದೃಷ್ಟಿಯಿಂದ ಮಾರ್ಚ್ 20ರಿಂದ 31ರವರೆಗೆ ಸಾರ್ವಜನಿಕರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕರು ದಯವಿಟ್ಟು ಸಹಕರಿಸಬೇಕು. ಏನಾದರೂ ಅವಹಾಲುಗಳನ್ನು ಹಿಡಿದುಕೊಂಡು ಬಂದಲ್ಲಿ ಮಿನಿ ವಿಧಾನಸೌಧದ ಮುಂಭಾಗವಿರುವ ಕೌಂಟರ್ನಲ್ಲಿ ನೀಡಬಹುದು. ಅದೇ ರೀತಿ ಈ ದಿನಗಳಲ್ಲಿ ಯಾವುದೇ ವಿಷಯದಲ್ಲೂ ಸಿಬ್ಬಂದಿಯನ್ನು ಭೇಟಿ ಮಾಡಲು ಅವಕಾಶ ಇರುವುದಿಲ್ಲ ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.