ETV Bharat / state

ಎನ್ಎಂಪಿಟಿ 13 ಸಿಬ್ಬಂದಿಗೆ ಕೊರೊನಾ: ನವ ಮಂಗಳೂರು ಬಂದರಿನ ಕಾರ್ಯಭಾರಕ್ಕೆ ಅಡ್ಡಿ - ಮಂಗಳೂರು ಎನ್ಎಂಪಿಟಿ 13 ಸಿಬ್ಬಂದಿಗೆ ಕೊರೊನಾ ಸುದ್ದಿ

ಕಂಟೈನರ್ ಸರಕು ನಿರ್ವಹಿಸುವ ಕಂಟೈನರ್ ರೀಸ್ಟಾಕರ್ ಯುನಿಟ್ ನ 13 ಮಂದಿ ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದು, ಇದರಿಂದಾಗಿ ಎರಡು ದಿನಗಳಿಂದ ಈ ಘಟಕ ಸ್ಥಗಿತಗೊಂಡಿದೆ.

ಎನ್ಎಂಪಿಟಿ 13 ಸಿಬ್ಬಂದಿಗೆ ಕೊರೊನಾ
ಎನ್ಎಂಪಿಟಿ 13 ಸಿಬ್ಬಂದಿಗೆ ಕೊರೊನಾ
author img

By

Published : Jul 19, 2020, 12:56 PM IST

ಮಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಸೋಂಕಿನ ಬಿಸಿ ಎನ್ಎಂಪಿಟಿಗೂ ತಟ್ಟಿದೆ‌. ಇದರಿಂದ ನವ ಮಂಗಳೂರು ಬಂದರಿನ ಕಾರ್ಯಭಾರದಲ್ಲಿ ಅಡ್ಡಿ ಉಂಟಾಗಿದೆ.

ಕಂಟೈನರ್ ಸರಕು ನಿರ್ವಹಿಸುವ ಕಂಟೈನರ್ ರೀಸ್ಟಾಕರ್ ಯುನಿಟ್ ನ 13 ಮಂದಿ ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದು, ಇದರಿಂದ ಎರಡು ದಿನಗಳಿಂದ ಈ ಘಟಕ ಸ್ಥಗಿತಗೊಂಡಿದೆ. ಅಲ್ಲದೆ ಈ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಖಾಸಗಿ ರೀಸ್ಟಾಕರ್ ಗಳು ಇದ್ದರೂ ಅವರದ್ದೇ ಕೆಲಸ ಕಾರ್ಯಗಳಿರುವುದರಿಂದ ಕಂಟೈನರ್ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ.

ಇಲ್ಲಿನ ಸಿಬ್ಬಂದಿಯಲ್ಲಿ ಹೆಚ್ಚಿನವರು ಒಟ್ಟಿಗೆ ವಾಸಿಸುತ್ತಿರುವ ಕಾರಣ ಉಳಿದವರಿಗೆ ಕೆಲಸಕ್ಕೆ ಬರದಂತೆ ಸೂಚಿಸಲಾಗಿದೆ. ಪ್ರಾಥಮಿಕ ಸೋಂಕಿತರಾಗಿರುವ ಕೆಲವರನ್ನು ಪ್ರತ್ಯೇಕಿಸಿ ಕ್ವಾರಂಟೈನ್ ಮಾಡಲಾಗಿದೆ. ಇದರಿಂದ ಆಗಸ್ಟ್ ಕೊನೆಯವರೆಗೆ ಬಂದರು‌ ನಿರ್ವಹಣೆ ಸವಾಲಿನ ಕೆಲಸವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.