ಬಂಟ್ವಾಳ(ದಕ್ಷಿಣ ಕನ್ನಡ): ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಮನೆಯ ಮೇಲೆ ಇಂದು ಬೆಳಗ್ಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಸಿ ರೋಡ್ನ ಕೈಕಂಬದಲ್ಲಿರುವ ಮನೆಗೆ ತನಿಖಾ ತಂಡ ಆಗಮಿಸುತ್ತಿದ್ದಂತೆ ರಿಯಾಜ್ ಬೆಂಬಲಿಗರು ಜಮಾಯಿಸಿದ್ದು, ಗೋ ಬ್ಯಾಕ್ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಏಕಕಾಲದಲ್ಲಿ ಸುಮಾರು 33 ಕಡೆ ಎನ್‌ಐಎ ದಾಳಿ ನಡೆಸಿತ್ತು. ಎಸ್ಡಿಪಿಐ ಹಾಗೂ ಇತರ ಸಂಘಟನೆಗಳ ಪ್ರಮುಖರ ಮನೆಗಳಿಗೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿತ್ತು. ರಿಯಾಜ್ ಪರಂಗಿಪೇಟೆ ಅವರು ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳಿಂದ ಗಮನ ಸೆಳೆದಿದ್ದರು. ಇವರ 'ತಾಂಟ್ರೆ ನೀ ಬಾ ತಾಂಟ್'(ತಾಕತ್ತಿದ್ದರೆ ಮುಟ್ಟಿ ನೋಡು) ಹೇಳಿಕೆ ಸಾಕಷ್ಟು ಟ್ರೋಲ್ಗೂ ಒಳಗಾಗಿತ್ತು.
ಇದನ್ನೂ ಓದಿ: ಹರ್ಷ ಹತ್ಯೆ ಪ್ರಕರಣ.. ವಿಶೇಷ ಕೋರ್ಟ್ಗೆ ಎನ್‌ಐಎ ಚಾರ್ಜ್ಶೀಟ್: ಹಿಂದೂಗಳ ಮೇಲೆ ಹಂತರಿಕರಿಗೆ ಇದೆಯಂತೆ ದ್ವೇಷ