ETV Bharat / state

ಮಾಜಿ ಶಾಸಕ ಬಿ.ಎಂ.ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ; ಮೊಮ್ಮಗನ ಪತ್ನಿ ದೀಪ್ತಿ ಮರಿಯಂ ಬಂಧನ - ಮಾಜಿ ಶಾಸಕ ಸಾಹಿತಿ ಬಿ ಎಂ ಇದಿನಬ್ಬ ಮನೆ ಮೇಲೆ ದಾಳಿ

ಮೂಲತಃ ಕೊಡಗು ಜಿಲ್ಲೆಯವರಾದ ದೀಪ್ತಿ ಮರಿಯಂ ಅವರು ಅನಾಸ್ ಅಬ್ದುಲ್ ರಹಿಮಾನ್‌ ಅವರನ್ನು ಪ್ರೀತಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾಗಿದ್ದರು. ಇದೀಗ ಈಕೆಯನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದೊಯ್ಯುತ್ತಿದ್ದಾರೆ.

ಮಾಜಿ ಶಾಸಕ ಬಿ.ಎಂ.ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ

author img

By

Published : Jan 3, 2022, 4:10 PM IST

Updated : Jan 3, 2022, 4:35 PM IST

ಮಂಗಳೂರು: ಮಾಜಿ ಶಾಸಕ, ಸಾಹಿತಿ ಬಿ.ಎಂ.ಇದಿನಬ್ಬ ಅವರ ಮೊಮ್ಮಗನ ಪತ್ನಿ ದೀಪ್ತಿ ಮರಿಯಂ ಅವರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಇದಿನಬ್ಬರ ಪುತ್ರ ಬಿ.ಎಂ.ಬಾಷಾ ಅವರ ಉಳ್ಳಾಲದಲ್ಲಿರುವ ನಿವಾಸಕ್ಕೆ ಇಂದು ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

2021 ಆಗಸ್ಟ್ ತಿಂಗಳಲ್ಲಿ ಇದೇ ಮನೆಗೆ ದಾಳಿ ನಡೆಸಿದ್ದ ಎನ್‌ಐಎ, ಬಾಷಾ ಅವರ ಕಿರಿಯ ಪುತ್ರ ಅನಾಸ್ ಅಬ್ದುಲ್ ರಹಮಾನ್ ಎಂಬಾತನನ್ನು ಐಸಿಸ್ ಜೊತೆ ಸಂಪರ್ಕ ಹೊಂದಿರುವ ಗಂಭೀರ ಆರೋಪದಡಿ ಬಂಧಿಸಿದ್ದರು. ಆ ವೇಳೆ ಮರಿಯಂ ಇಲ್ಲಿದ್ದುಕೊಂಡೇ ಐಸಿಸ್ ನೆಟ್ವರ್ಕ್‌ಗೆ ಯುವಕರನ್ನು ಸೇರಿಸುವ ಜಾಲದಲ್ಲಿ ನಿರತಳಾಗಿದ್ದಳು ಎಂಬ ಶಂಕೆ ಪೊಲೀಸರಿಗಿತ್ತು. ಆ ಕಾರಣಕ್ಕಾಗಿ ಆಕೆಯನ್ನು ಅಂದು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರೇ ಹೊರತು ಬಂಧಿಸಿರಲಿಲ್ಲ.

ಮಾಜಿ ಶಾಸಕ ಬಿ.ಎಂ.ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ
ಮಾಜಿ ಶಾಸಕ ಬಿ.ಎಂ.ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ

ಇದನ್ನೂ ಓದಿ: ಮಾಜಿ ಶಾಸಕ ಇದಿನಬ್ಬ ಪುತ್ರನ ಮನೆಗೆ ಮುತ್ತಿಗೆ ಯತ್ನ.. ವಿಹಿಂಪ, ಬಜರಂಗದಳ ಕಾರ್ಯಕರ್ತರ ಬಂಧನ

ಮೂಲತಃ ಕೊಡಗು ಜಿಲ್ಲೆಯವಳಾದ ದೀಪ್ತಿ ಮರಿಯಂ, ಅನಾಸ್ ಅಬ್ದುಲ್‌ ರಹಿಮಾನ್‌ ಅವರನ್ನು ಪ್ರೀತಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಮದುವೆಯಾಗಿದ್ದರು.

ಇದೀಗ ಈಕೆಯನ್ನು ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣದ ಇನ್ನೂ ಹೆಚ್ಚಿನ ವಿಚಾರಣೆಗೆ ಅವರನ್ನು ದೆಹಲಿಗೆ ಕರೆದೊಯ್ಯಲಾಗುತ್ತಿದೆ.

Last Updated : Jan 3, 2022, 4:35 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.