ETV Bharat / state

ಕಡಬದ ನೆಲ್ಯಾಡಿಯಲ್ಲೂ ಎನ್ಐಎ ದಾಳಿ: ಸಾಧಿಕ್ ಎಂಬಾತನಿಗಾಗಿ ಶೋಧ..!

author img

By

Published : Nov 5, 2022, 2:40 PM IST

Updated : Nov 5, 2022, 3:53 PM IST

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಎನ್ಐಎ ಮೂವರನ್ನು ವಶಕ್ಕೆ ಪಡೆದಿದ್ದು, ಸುಳ್ಯ, ಉಪ್ಪಿನಂಗಡಿ, ಮೈಸೂರು, ಹುಬ್ಬಳ್ಳಿಯಲ್ಲೂ ದಾಳಿ ನಡೆಸಿತ್ತು.

nia attack in nelyadi of kadaba
ಕಡಬದ ನೆಲ್ಯಾಡಿಯಲ್ಲೂ ಏನ್ಐಎ ದಾಳಿ

ನೆಲ್ಯಾಡಿ: ಬಿಜೆಪಿ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಎನ್​ಐಎ ಅಧಿಕಾರಿಗಳ ತಂಡ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಶಾಂತಿಬೆಟ್ಟು ನಿವಾಸಿ ಸಾದಿಕ್‌ ಎಂಬವರ ಮನೆಗೆ ಇಂದು ದಾಳಿ ನಡೆಸಿದೆ.

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನ ಕಾರ್ಯಾಚರಣೆ ಕೈಗೊಂಡಿರುವ ಎನ್​​​​ಐಎ ಅಧಿಕಾರಿಗಳ ತಂಡ ನ.4ರಂದು ರಾತ್ರಿಯೇ ನೆಲ್ಯಾಡಿಗೆ ಆಗಮಿಸಿದ್ದು, ನ.5ರಂದು ಬೆಳಗ್ಗಿನಿಂದ ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಎಂಬಲ್ಲಿರುವ ಸಾದಿಕ್‌ ಅವರ ಮನೆಗೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದೆ. ಈ ವೇಳೆ ಮನೆಯಲ್ಲಿ ಸಾದಿಕ್‌ ಇರಲಿಲ್ಲ ಎಂದು ತಿಳಿದು ಬಂದಿದೆ.

ಕೆಲವರ್ಷಗಳ ಹಿಂದೆ ಮಂಗಳೂರಿನ ಬಿ.ಸಿ ರೋಡಿನಲ್ಲಿ ನಡೆದ ಶರತ್‌ ಮಡಿವಾಳ ಕೊಲೆ ಪ್ರಕರಣದ ಆರೋಪಿಗಳಿಗೆ ಸಹಕಾರ ನೀಡಿದ ಆರೋಪದಲ್ಲಿ ಸಾದಿಕ್​ನನ್ನು ಬಂಧಿಸಲಾಗಿತ್ತು. ಆ ಬಳಿಕ ಈತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು. ಸಾದಿಕ್‌ ನೆಲ್ಯಾಡಿಯಲ್ಲಿ ಕೆಲ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಎನ್ಐಎ ದಾಳಿ, ಮೂವರ ಬಂಧನ

Last Updated : Nov 5, 2022, 3:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.