ಉಳ್ಳಾಲ (ದಕ್ಷಿಣ ಕನ್ನಡ): ಎರಡು ವರ್ಷಗಳಿಂದ ಅಧ್ಯಕ್ಷರಿಲ್ಲದೆ ಖಾಲಿಯಿದ್ದ ಕೋಟೆಕಾರು ಪಟ್ಟಣ ಪಂಚಾಯತ್ಗೆ ಬಿಜೆಪಿಯ ಜಯಶ್ರೀ ಫ್ರಫುಲ್ಲಾ ದಾಸ್ ನೂತನ ಅಧ್ಯಕ್ಷರಾಗಿ ಗುರುವಾರ ಅವಿರೋಧ ಆಯ್ಕೆಯಾದರು.
ಮೀಸಲಾತಿಗೆ ಅನುಸಾರವಾಗಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಇಲ್ಲದೇ ಎರಡು ವರ್ಷಗಳ ಕಾಲ ಉಪಾಧ್ಯಕ್ಷರ ಹೆಗಲಿಗೆ ಪಟ್ಟಣ ಪಂಚಾಯತ್ ಆಡಳಿತವನ್ನು ವಹಿಸಲಾಗಿತ್ತು. ಭಾರತಿ ರಾಘವ ಗಟ್ಟಿ ಉಪಾಧ್ಯಕ್ಷರಾಗಿದ್ದರು.
ಎರಡು ವರ್ಷಗಳ ಹಿಂದೆ ಎಸ್ಟಿ ಮಹಿಳೆಗೆ ಮೀಸಲಾತಿ ಬಂದಿರುವುದರಿಂದ ಬಿಜೆಪಿಯಿಂದ ಅಭ್ಯರ್ಥಿ ಇರಲಿಲ್ಲ. ಆದ್ದರಿಂದ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾತ್ರ ನಡೆದಿತ್ತು.
ಬಿಜೆಪಿ ಬೆಂಬಲಿತ 11, ಕಾಂಗ್ರೆಸ್-4 ಎಸ್ಡಿಪಿಐ-1 ಹಾಗೂ ಸಿಪಿಎನ 1 ಅಭ್ಯರ್ಥಿ ಚುನಾಯಿತರಾಗಿದ್ದರು. ಇದೀಗ ಎರಡೂವರೆ ವರ್ಷಗಳ ಬಳಿಕ ಅಧ್ಯಕ್ಷರ ಆಯ್ಕೆ ನಡೆದರೂ ಕೇವಲ ಆರು ತಿಂಗಳಿಗೆ ಮಾತ್ರ ಅಧಿಕಾರಾವಧಿ ಇರಲಿದೆ.