ETV Bharat / state

ದ.ಕ.ಜಿಲ್ಲೆಯ ಸಾಧನೆಗೆ ಇಲ್ಲಿನ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳೇ ಕಾರಣ: ಕೋಟಾ ಶ್ರೀನಿವಾಸ್​ ಪೂಜಾರಿ - ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಎ.ಜೆ. ಆಸ್ಪತ್ರೆಯು ಒಂದು ವರ್ಷಕ್ಕೆ ನೂರರಿಂದ ಮುನ್ನೂರರಷ್ಟು ವೈದ್ಯರನ್ನು ಸಮಾಜಕ್ಕೆ ನೀಡುತ್ತಿದೆ ಎಂದಾದರೆ ಅದಕ್ಕಿಂತ ಉತ್ತಮವಾದ ಕೆಲಸ ಇನ್ನೊಂದಿಲ್ಲ ಎಂದು ನಗರದಲ್ಲಿ ನಡೆದ ರಾಷ್ಟ್ರೀಯ ಫಿಸಿಯೋಥೆರಪಿ ಕಾರ್ಯಾಗಾರದಲ್ಲಿ ಸಚಿವ ಕೋಟಾ ಶ್ರೀನಿವಾಸ್​ ಪೂಜಾರಿ ಹೇಳಿದ್ದಾರೆ.

Kota Srinivasa Poojary
ಕೋಟಾ ಶ್ರೀನಿವಾಸ ಪೂಜಾರಿ
author img

By

Published : Dec 6, 2019, 7:37 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಭಾರತದಲ್ಲೇ ಅತ್ಯಂತ ಎತ್ತರದ ಸ್ಥಾನದಲ್ಲಿದೆ. ಇದಕ್ಕೆ ಯಾವುದೇ ಸರ್ಕಾರ ಕಾರಣವಲ್ಲ. ಬದಲಾಗಿ ನಮ್ಮ ಜಿಲ್ಲೆಯ ಹಿರಿಯರು ಕಟ್ಟಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಕಾರಣವೆಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್​ ಪೂಜಾರಿ ಹೇಳಿದರು.

ರಾಷ್ಟ್ರೀಯ ಫಿಸಿಯೋಥೆರಪಿ ಕಾರ್ಯಾಗಾರ

ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಡಿಟೋರಿಯಂನಲ್ಲಿ‌ ನಡೆದ ರಾಷ್ಟ್ರೀಯ ಫಿಸಿಯೋಥೆರಪಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎ.ಜೆ. ಆಸ್ಪತ್ರೆಯು ಒಂದು ವರ್ಷಕ್ಕೆ ನೂರರಿಂದ ಮುನ್ನೂರರಷ್ಟು ವೈದ್ಯರನ್ನು ಸಮಾಜಕ್ಕೆ ನೀಡುತ್ತಿದೆ ಎಂದಾದರೆ ಅದಕ್ಕಿಂತ ಉತ್ತಮವಾದ ಕೆಲಸ ಇನ್ನೊಂದಿಲ್ಲ ಎಂದು ಬಣ್ಣಿಸಿದರು.

ಪ್ರತಿಯೊಬ್ಬ ಭಾರತೀಯನೂ ಆರೋಗ್ಯಪೂರ್ಣವಾಗಿ ಇರುವಂತಹ ಅವಕಾಶಗಳನ್ನು ಪ್ರತಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ನೀಡಬೇಕೆಂದು ಪ್ರಧಾನಿ ಮೋದಿ ಹೇಳುತ್ತಾರೆ. ಅದರ ಹಿಂದೆ ಇರುವ ಯೋಚನೆ, ದೂರಗಾಮಿ ಕಲ್ಪನೆ ಬಹಳಷ್ಟು ಅರ್ಥಪೂರ್ಣವಾಗಿದೆ. ದ.ಕ. ಜಿಲ್ಲೆ ಆರೋಗ್ಯದಲ್ಲಿ ಎಷ್ಟು ಮುಂದುವರಿದಿದೆ ಎಂದರೆ ಇಲ್ಲಿ‌ ಒಂದು ಸಾವಿರ ಹೆರಿಗೆಯಾದರೆ ಒಂದು ಮಗು ಮೃತಪಡುತ್ತದೆ. ಅದೇ ಹಿಂದುಳಿದ ಜಿಲ್ಲೆಗಳಲ್ಲಿ ಒಂದು ಸಾವಿರ ಹೆರಿಗೆಯಾದರೆ ಸುಮಾರು ಇಪ್ಪತ್ತೈದರಷ್ಟು ಮಕ್ಕಳು ಮೃತಪಡುವ ಸಂಭವವಿರುತ್ತದೆ ಎಂದರು.

Intro:ಮಂಗಳೂರು: ದ.ಕ.ಜಿಲ್ಲೆಯು ಶಿಕ್ಷಣ ಮತ್ತು ಆರೋಗ್ಯದಲ್ಲೇ ಭಾರತದಲ್ಲೇ ಅತ್ಯಂತ ಎತ್ತರದ ಸ್ಥಾನದಲ್ಲಿದೆ. ಇದಕ್ಕೆ ಯಾವುದೇ ಸರಕಾರ ಕಾರಣವಲ್ಲ. ಬದಲಾಗಿ ನಮ್ಮ ಜಿಲ್ಲೆಯ ಹಿರಿಯರು ಕಟ್ಟಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಕಾರಣ ಎಂದು ದ.ಕ.ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಕುಂಟಿಕಾನದಲ್ಲಿರುವ ಎ.ಜೆ.ಆಡಿಟೋರಿಯಂನಲ್ಲಿ‌ ನಡೆದ ರಾಷ್ಟ್ರೀಯ ಫಿಸಿಯೋಥೆರಪಿ ಕಾರ್ಯಗಾರ ಕ್ರಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎ.ಜೆ. ಆಸ್ಪತ್ರೆಯು ಒಂದು ವರ್ಷಕ್ಕೆ ನೂರರಿಂದ ಮುನ್ನೂರರಷ್ಟು ವೈದ್ಯರನ್ನು ಸಮಾಜಕ್ಕೆ ನೀಡುತ್ತಿದೆ ಎಂದಾದರೆ ಅದಕ್ಕಿಂತ ಉತ್ತಮವಾದ ಕೆಲಸ ಇನ್ನೊಂದಿಲ್ಲ ಎಂದು ಹೇಳಿದರು.

Body:ಪ್ರತಿಯೊಬ್ಬ ಭಾರತೀಯನೂ ಆರೋಗ್ಯಪೂರ್ಣ ವಾಗಿ ಇರುವಂತಹ ಅವಕಾಶಗಳನ್ನು ಪ್ರತೀ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ನೀಡಬೇಕು ಎಂದು ಪ್ರಧಾನಿ ಮೋದಿಯವರು ಹೇಳುತ್ತಾರೆ. ಅದರ ಹಿಂದೆ ಇರುವ ಯೋಚನೆ, ದೂರಗಾಮಿ ಕಲ್ಪನೆ ಬಹಳಷ್ಟು ಅರ್ಥಪೂರ್ಣ ವಾಗಿದೆ. ದ.ಕ.ಜಿಲ್ಲೆ ಆರೋಗ್ಯದಲ್ಲಿ ಎಷ್ಟು ಮುಂದುವರಿದಿದೆ ಎಂದರೆ ಇಲ್ಲಿ‌ ಒಂದು ಸಾವಿರ ಹೆರಿಗೆಯಾದರೆ ಒಂದು ಮಗು ಮೃತಪಡುತ್ತದೆ. ಅದೇ ಉಳಿದ ಹಿಂದುಳಿದ ಕೆಲವೊಂದು ಜಿಲ್ಲೆಗಳಲ್ಲಿ ಒಂದು ಸಾವಿರ ಹೆರಿಗೆಯಾದರೆ ಸುಮಾರು ಇಪ್ಪತ್ತೈದರಷ್ಟು ಮಕ್ಕಳು ಮೃತಪಡುವ ಸಂಭವವಿರುತ್ತದೆ. ಆ ಮಟ್ಟಕ್ಕೆ ನಾವು ಆರೋಗ್ಯದಲ್ಲಿ ಅತ್ಯಂತ ಎತ್ತರಕ್ಕಿದ್ದೇವೆ. ಇದಕ್ಕೆ ನಮ್ಮ ಆಸ್ಪತ್ರೆಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳೇ ಕಾರಣ ಎಂದು ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.