ETV Bharat / state

10 ವರ್ಷಗಳೊಳಗೆ NEP ಅನುಷ್ಠಾನದ ಗುರಿ: ಡಾ. ಅಶ್ವತ್ಥ್​​​ ನಾರಾಯಣ

author img

By

Published : Aug 30, 2021, 7:56 PM IST

ಕೇಂದ್ರ ಸರ್ಕಾರ ನಿಯೋಜಿಸಿದ ಅವಧಿಯ ಒಳಗೆ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ತಿಳಿಸಿದರು.

national-education-policy-implementation-within-10-years-in-the-state
ಅಶ್ವತ್ಥ್​​​ ನಾರಾಯಣ

ಮಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(NEP) ರಾಜ್ಯದಲ್ಲಿ 15 ವರ್ಷಗಳೊಳಗೆ ಅನುಷ್ಠಾನ ಮಾಡಲು ಸೂಚಿಸಿದೆ. ಆದರೆ ರಾಜ್ಯದಲ್ಲಿ 10 ವರ್ಷಗಳ ಒಳಗೆ ಅನುಷ್ಠಾನಗೊಳಿಸಲು‌ ಗುರಿ ಇರಿಸಲಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್​ ನಾರಾಯಣ ಸಿ.ಎನ್. ಹೇಳಿದರು.

10 ವರ್ಷಗಳೊಳಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಗುರಿ

ನಗರದ ಕೊಣಾಜೆಯಲ್ಲಿರುವ ಮಂಗಳೂರು ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ರಾಜ್ಯದ ವಿವಿಗಳು ಎನ್ಇಪಿ ಅನುಷ್ಠಾನಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ನಡೆಸುತ್ತಿವೆ. ಇದಕ್ಕೆ ಬೇಕಾದ ಜಾಗೃತಿ ಹಾಗೂ ಸಹಕಾರವನ್ನು ಸರ್ಕಾರದ ಮಟ್ಟದಲ್ಲಿ ನೀಡಲಾಗುತ್ತಿದೆ. ಈ ಮೂಲಕ‌ ವರ್ಷದೊಳಗೆ 10 ಸಾವಿರ ಪ್ರಾಧ್ಯಾಪಕರಿಗೆ ತರಬೇತಿಯನ್ನು ನೀಡುವ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಹಳ್ಳಿಯಿಂದ ದಿಲ್ಲಿವರೆಗೆ ಸಾಕಷ್ಟು ಜನರ ಸಲಹೆಗಳನ್ನು ಪಡೆದು‌ ಎನ್ಇಪಿಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಈ ಮೂಲಕ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ. ಕೌಶಲ್ಯತೆಯನ್ನು ಕಲಿಕೆಯ ಜೊತೆಜೊತೆಗೆ ಅಳವಡಿಸಲು ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ವಿಷಯಗಳ ಆಯ್ಕೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಶಿಕ್ಷಣದ ರೀತಿ-ನೀತಿಗಳು, ಮೌಲ್ಯಮಾಪನ, ಪಠ್ಯಕ್ರಮಗಳಲ್ಲಿ ಸುಧಾರಣೆಗಳನ್ನು ಕಾಣಬೇಕಿದೆ. ಇದಕ್ಕೆ ಇನ್ನೂ ಹೆಚ್ಚಿನ ಆದ್ಯತೆಗಳನ್ನು ನಾವು ನೀಡಿಲ್ಲ. ಕಲಿಕೆಯಲ್ಲಿ ಆವಿಷ್ಕಾರಗಳಿಗೆ, ತಂತ್ರಜ್ಞಾನಗಳಿಗೆ ಎಷ್ಟು ಒತ್ತು ನೀಡಿದರೂ ಸಾಲುವುದಿಲ್ಲ. ಆದರೆ ಈ ಲೋಪಗಳ ಬಗ್ಗೆ ಸಕಾಲಿಕ ನಿರ್ಣಯ ಕೈಗೊಳ್ಳದ ಕಾರಣ ಸಮಾಜಕ್ಕೆ ದೊಡ್ಡಮಟ್ಟದ ನಷ್ಟ ಸಂಭವಿಸಿದೆ. ಇದೀಗ 34 ವರ್ಷಗಳ ಬಳಿಕ ಶಿಕ್ಷಣದಲ್ಲಿ ಹೊಸ ಬದಲಾವಣೆ ತರಲಾಗುತ್ತಿದೆ ಎಂದರು.

ಇದೆ ಸಂದರ್ಭದಲ್ಲಿ ಡಾ.ಅಶ್ವತ್ಥ್​​ ನಾರಾಯಣ ಅವರು ಮೂಡುಬಿದಿರೆಯ ಬನ್ನಡ್ಕದಲ್ಲಿ‌ ಸ್ಥಾಪಿಸಲಾಗುವ ಮಂಗಳೂರು ವಿವಿಯ ನೂತನ ಘಟಕವನ್ನು ಉದ್ಘಾಟನೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.